Friday, August 12, 2022

Latest Posts

ರಾಜ್ಯದ ಶೌರ್ಯ ಪ್ರಶಸ್ತಿ ಪುರಸ್ಕೃತ ವೀರ ಯೋಧರ ಗೌರವ ಧನ ಹೆಚ್ಚಳ: ಸಿಎಂ ಯಡಿಯೂರಪ್ಪ ಘೋಷಣೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶೌರ್ಯ ಪ್ರಶಸ್ತಿ ಪುರಸ್ಕೃತ ರಾಜ್ಯದ ವೀರ ಯೋಧರಿಗೆ ನೀಡಲಾಗುತ್ತಿರುವ ಗೌರವ ಧನವನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್.​ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ‘ಭಾರತ ಹಾಗೂ ಪಾಕಿಸ್ತಾನ ನಡುವಿನ 1971ರ ಯುದ್ಧದ ವಿಜಯೋತ್ಸವ’ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಅವರು, ಪರಮವೀರ ಚಕ್ರ, ಅಶೋಕ ಚಕ್ರ ಪುರಸ್ಕೃತ ಯೋಧರಿಗೆ ನೀಡುವ ಗೌರವಧನವನ್ನು 25 ಲಕ್ಷದಿಂದ 1 ಕೋಟಿಗೆ ಹೆಚ್ಚಳ ಮಾಡಲಾಗುವುದು.
ಜೊತೆಗೆ ಮಹಾವೀರ ಚಕ್ರ ಪುರಸ್ಕೃತ ಯೋಧರಿಗೆ ನೀಡಲಾಗುವ ಗೌರವಧನವನ್ನು 12 ಲಕ್ಷ ರಿಂದ 50 ಲಕ್ಷ ರೂ, ವೀರಚಕ್ರ ಪುರಸ್ಕೃತರಿಗೆ 8 ರಿಂದ 25 ಲಕ್ಷ, ಶೌರ್ಯ ಚಕ್ರ ಪುರಸ್ಕೃತರಿಗೆ 8 ರಿಂದ 25 ಲಕ್ಷ ರೂ. ಹಾಗೂ ಕೀರ್ತಿ ಚಕ್ರ ಪುರಸ್ಕೃತರಿಗೆ‌ ನೀಡುವ ಗೌರವಧನವನ್ನು 12‌ಲಕ್ಷ ದಿಂದ 50 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.
ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತ ವೀರ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ ಸಲ್ಲಿಸಿದರು.
ಮಹಾವೀರಚಕ್ರ ಪುರಸ್ಕೃತ ಲೆ. ಕರ್ನಲ್ ಪತ್ನಿ, ಮಹಾವೀರ ಚಕ್ರ ಪುರಸ್ಕೃತ ಲೆಪ್ಟಿನೆಂಟ್ ಕಮಾಂಡರ್ ಸಂತೋಷ್ ಕುಮಾರ್ ಗುಪ್ತಾ, ವೀರ್ ಚಕ್ರ ಪುರಸ್ಕೃತರಾದ ಮೇಜರ್ ಜನರಲ್ ಕೆ.ಪಿ ನಂಜಪ್ಪ, ಬ್ರಿಗೇಡಿಯರ್ ಪಿ.ವಿ ಸಹದೇವನ್, ರಿಷಿರಾಜ್ ಸೂದ್, ಪುರಸ್ಕೃತ ಕಮಾಂಡರ್ ಎ ಎಸ್ ಪನ್ವರ್, ವಿಂಗ್ ಕಮಾಂಡರ್ ಅಸ್ಪಾರಿ ರಘನಾಥನ್ ಗೆ ಸಿಎಂ ಗೌರವ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss