Tuesday, June 28, 2022

Latest Posts

ಚುನಾವಣಾ ಫಲಿತಾಂಶದ ಚಿಂತೆಬಿಟ್ಟು ರಾಜ್ಯಕ್ಕೆ 30 ಮೆಟ್ರಿಕ್ ಟನ್ ಆಮ್ಲಜನಕ ತರಿಸುವಲ್ಲಿ ಯಶಸ್ವಿಯಾದ ಸಿಎಂ ಯಡಿಯೂರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಂಚ‌ರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಉಪಚುನಾವಣಾ ಫಲಿತಾಂಶದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬ್ಯುಸಿಯಾಗಿದ್ದು, ‌ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಸತತವಾಗಿ ಸಂಪರ್ಕ ಮಾಡಿ ರಾಜ್ಯಕ್ಕೆ ಆಮ್ಲಜನಕ ತರುವ ಸಂಬಂಧ ಚರ್ಚೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಇನ್ನೆರಡು ದಿನದಲ್ಲಿ ರಾಜ್ಯಕ್ಕೆ 30 ಮೆಟ್ರಿಕ್ ಟನ್ ಆಮ್ಲಜನಕ ಬರಲಿದೆ.
ಬೆಳಗ್ಗೆಯಿಂದ ಚುನಾವಣಾ ಫಲಿತಾಂಶದತ್ತ ಎಲ್ಲರ ಗಮನವಿದ್ದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಆಮ್ಲಜನಕ ಕೊರತೆ ನೀಗಿಸುವ ಕುರಿತು ಸತತ ಪ್ರಯತ್ನದಲ್ಲಿ ತೊಡಗಿದ್ದರು.
ಈಗಾಗಲೇ ಭುವನೇಶ್ವರಕ್ಕೆ ಎರಡು ಟ್ಯಾಂಕರ್​​​ಗಳು ಬೆಂಗಳೂರಿನಿಂದ ಏರ್​​​​ಲಿಫ್ಟ್​​ ಆಗಿದ್ದು. ಅವುಗಳ ಭರ್ತಿ ಮಾಡಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಜೊತೆ ಸತತ ಸಭೆ ನಡೆಸಿ ಆಮ್ಲಜನಕ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಎಂ ಪ್ರಯತ್ನದ ಫಲವಾಗಿ ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ 30 ಟನ್ ಆಕ್ಸಿಜನ್ ಆಗಮಿಸಲಿದೆ. ನಾಳೆ ಭುವನೇಶ್ವರದಿಂದ ರಸ್ತೆ ಮೂಲಕ ಎರಡು ಟ್ಯಾಂಕರ್​ಗಳಲ್ಲಿ ರಾಜ್ಯಕ್ಕೆ ಅಕ್ಸಿಜನ್ ಆಗಮಿಸಲಿದೆ. ಒಂದು ಟ್ಯಾಂಕರ್​ನಲ್ಲಿ 15 ಟನ್ ಆಕ್ಸಿಜನ್​ನಂತೆ ಒಟ್ಟು 2 ಟ್ಯಾಂಕರ್ ಮೂಲಕ 30 ಟನ್ ಆಕ್ಸಿಜನ್ ರಾಜ್ಯಕ್ಕೆ ಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss