ಹೊಸದಿಗಂತ ಡಿಜಿಟಲ್
ಇನ್ನೇನು, ಉಷ್ಣವಿದ್ಯುತ್ ಸ್ಥಾವರಗಳಲ್ಲೆಲ್ಲ ಕಲ್ಲಿದ್ದಲು ಕೊರತೆಯಾಗಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಸ್ಥಿತಿಯಿಂದ ಭಾರತ ಬಹುತೇಕ ಹೊರಬಂದಿದೆ.
ಕೇವಲ ನಾಲ್ಕೇ ದಿನದ ಹೆಚ್ಚುವರಿ ಕಲ್ಲಿದ್ದಲು ದಾಸ್ತಾನು ಹೊಂದಿರುವ ಸ್ಥಾವರಗಳ ಸಂಖ್ಯೆ ವಾರದ ಹಿಂದೆ 69 ಇದ್ದದ್ದು, ಅಕ್ಟೋಬರ್ 18ರ ವೇಳೆಗೆ 58ಕ್ಕೆ ಇಳಿದಿದೆ. ಒಟ್ಟಾರೆಯಾಗಿ 6,857 ಮೆಗಾವ್ಯಾಟ್ ವ್ಯಾಪ್ತಿಯಲ್ಲಿ ಎದುರಾಗಿದ್ದ ಕಲ್ಲಿದ್ದಿಲಿನ ಕೊರತೆ ಆತಂಕ ಈಗ 2,060 ಮೆಗಾವ್ಯಾಟ್ ಗೆ ಇಳಿದಿದ್ದು ಸಹಜ ಸ್ಥಿತಿಯತ್ತ ಹೆಜ್ಜೆ ಇಡುತ್ತಿದೆ.
ದೇಶದ ಹಲವೆಡೆಗಳಲ್ಲಿ ಮಳೆ ಸುರಿದಿದೆ. ಚಳಿ ಸಹ ಪ್ರಾರಂಭವಾಗುತ್ತಿದೆ. ಇವೆಲ್ಲವೂ ವಿದ್ಯುತ್ ಬೇಡಿಕೆಯನ್ನು ಇಳಿಸುತ್ತಿವೆ. ಕೊರತೆ ಉಂಟಾಗಬಾರದೆಂದು ಸರ್ಕಾರ ಸಹ ಹಲವು ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಕಲ್ಲಿದ್ದಲು ಪೂರೈಕೆಯೂ ಸುಧಾರಿಸಿದೆ.