ನನಸಾದ ಕರಾವಳಿಯ ಕನಸು: ಮಂಗಳೂರಿಂದ ದೆಹಲಿಗೆ ಹಾರಿತು ಇಂಡಿಗೋ ಏರ್ ವೇಸ್!

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರಿನಿಂದ ದೆಹಲಿಗೆ ನೇರ ವಿಮಾನಯಾನ ಆರಂಭವಾಗಬೇಕೆಂಬ ಕರಾವಳಿಗರ ಬೇಡಿಕೆ ಕೊನೆಗೂ ಈಡೇರಿದೆ.
ಶುಕ್ರವಾರದಿಂದ ಇಂಡಿಗೋ ಏರ್‌ವೇಸ್‌ನ ವಿಮಾನ ಮಂಗಳೂರು- ದೆಹಲಿ ನಡುವೆ ವಿಮಾನ ಯಾನ ಆರಂಭಿಸಿದ್ದು, ಈ ಭಾಗದ ಜನತೆಯಲ್ಲಿ ಹರ್ಷವನ್ನುಂಟುಮಾಡಿದೆ.
ಶುಕ್ರವಾರ ಹಾರಾಟ ನಡೆಸಿದ 6ಇ 2164 ವಿಮಾನದಲ್ಲಿ 77 ಪ್ರಯಾಣಿಕರು ದೆಹಲಿಯಿಂದ ಮಂಗಳೂರು ತಲುಪಿದ್ದರೆ,6ಇ 2165ವಿಮಾನದಲ್ಲಿ 140 ಪ್ರಯಾಣಿಕರು ಮಂಗಳೂರಿನಿಂದ ದೆಹಲಿಗೆ ಪ್ರಯಾಣಿಸಿದರು. ಕ್ಯಾಪ್ಟನ್ ಅನುಭವ ಬ್ಯಾನರ್ಜಿ ಈ ಹಾರಾಟದ ನೇತೃತ್ವ ವಹಿಸಿದ್ದರು. 6ಇ 2164 ಮತ್ತು 6ಇ 2164 ವಿಮಾನಗಳು ಭಾನುವಾರ, ಸೋಮವಾರ, ಬುಧವಾರ ಮತ್ತು ಸಂಚರಿಸಲಿದೆ.
6ಇ 2164 ವಿಮಾನ ದೆಹಲಿಯಿಂದ ಬೆಳಗ್ಗೆ 7.40ಕ್ಕೆ ಹೊರಟು ಬೆಳಗ್ಗೆ 10.45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇದೇ ವೇಳೆ 6ಇ 2145 ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.45ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!