Thursday, August 11, 2022

Latest Posts

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಫೀ.ಮಾ.ಕಾರ್ಯಪ್ಪ ಹೆಸರಿಡಲು ಸಂಸದ ಪ್ರತಾಪ್ ಸಿಂಹ ಒತ್ತಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಮತ್ತು ಮೈಸೂರು ಜಿಲ್ಲೆಯ ಅರಣ್ಯ ವ್ಯಾಪ್ತಿ ಹೊಂದಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ(ನಾಗರಹೊಳೆ) ಎಂಬ ಹೆಸರನ್ನು ಬದಲಿಸಿ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಾಷ್ಟ್ರೀಯ ಉದ್ಯಾನವನ’ಎಂದು ಮರು ನಾಮಕರಣ ಮಾಡಬೇಕೆಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಲಿಖಿತ ಮನವಿ ಸಲ್ಲಿಸಿರುವ ಪ್ರತಾಪ್ ಸಿಂಹ, ನೆಹರು ಮತ್ತು ಗಾಂಧಿ ಕುಟುಂಬದ ಹೆಸರಲ್ಲಿ 103 ರಾಷ್ಟ್ರೀಯ ಉದ್ಯಾನವನಗಳಿವೆ. ಅದರಲ್ಲಿ 3 ಉದ್ಯಾನಗಳು ರಾಜೀವ್ ಗಾಂಧಿ ಅವರ ಹೆಸರಲ್ಲಿದೆ ಎಂದು ಗಮನ ಸೆಳೆದಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದೇಶದ ಮಹಾನ್ ಸೇನಾ ದಂಡ ನಾಯಕರಾಗಿದ್ದು, ಶಿಸ್ತಿಗೆ ಮತ್ತೊಂದು ಹೆಸರಾಗಿದ್ದರು. ಕೊಡಗಿನ ಜನರು ಸಾಮಾಜಿಕ ಜಾಲತಾಣದಲ್ಲೂ ನಾಗರಹೊಳೆ ಉದ್ಯಾನವನಕ್ಕೆ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ’ ಎಂದು ಮರು ನಾಮಕರಣ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಕೊಡಗಿನ ಶೌರ್ಯ ಪರಂಪರೆಗೆ ಗೌರವ ನೀಡುವ ಮೂಲಕ ರಾಜೀವ್ ಗಾಂಧಿ ಹೆಸರನ್ನು ಬದಲಿಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ನಾಗರಹೊಳೆಯನ್ನು 1955ರಲ್ಲಿ ಅಭಯಾರಣ್ಯ ಎಂದು ಘೋಷಿಸಿದ ಸಂದರ್ಭ 258 ಚದರ ಕಿ.ಮೀ ವ್ಯಾಪ್ತಿ ಹೊಂದಿತ್ತು. ಕೊಡಗು ಮತ್ತು ಮೈಸೂರು ಅರಣ್ಯ ಹೊಂದಿಕೊಂಡು ಒಟ್ಟು 643.39 ಚದರ ಕಿ.ಮೀ ವಿಸ್ತರಣೆ ಮಾಡಲಾಗಿದೆ. ತದನಂತರ 1983ರಲ್ಲಿ ನಾಗರಹೊಳೆಯನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ವಿವರಿಸಿದ್ದಾರೆ.
ಜನರಲ್‌ಗಳ ನಾಡು: ಕೊಡಗು ಜಿಲ್ಲೆ ದೇಶ ಸೇವೆಗೆ ತನ್ನದೇ ಆದ ಕೊಡುಗೆ ನೀಡಿದೆ. 11 ಮಂದಿ ಸೇನಾಧಿಕಾರಿಗಳು ಇಂದಿಗೂ ರಕ್ಷಣಾ ಪಡೆಯ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಕೊಡಗು 20 ಮಂದಿ ಮೇಜರ್ ಜನರಲ್‌ಗಳು ಮತ್ತು 4 ಮಂದಿ ಏರ್ ಮಾರ್ಷಲ್‌ಗಳ್ನು ನೀಡಿದೆ. ಹೀಗಾಗಿ ಈ ಪುಟ್ಟ ಜಿಲ್ಲೆಯನ್ನು ‘ಜನರಲ್‌ಗಳ ನಾಡು’ ಎಂದೂ ಕರೆಯಲಾಗುತ್ತದೆ ಎಂದು ಪ್ರತಾಪ್ ಸಿಂಹ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯುದ್ಧದಲ್ಲಿ ಹುತಾತ್ಮರಾದ ಯೋಧರ ನೆನಪಿಗೆ ಕೊಡಗು ಜಿಲ್ಲೆ ಯುದ್ಧ ಸ್ಮಾರಕವನ್ನೂ ಹೊಂದಿದೆ. ಜನರಲ್ ತಿಮ್ಮಯ್ಯ ಅವರ ಹೆಸರಲ್ಲಿ ವಾರ್ ಮೆಮೋರಿಯಲ್ ಕೂಡಾ ಇದ್ದು, ಕೆಲ ತಿಂಗಳ ಹಿಂದೆ ಲೋಕಾರ್ಪಣೆಯಾಗಿದೆ. ಕೊಡಗಿನ ವೀರ ಪರಂಪರೆ ಮುಂದುವೆರೆಯಲಿದ್ದು, ಕೊಡಗಿನ ಶೌರ್ಯ ಪರಂಪರೆಯನ್ನು ಗೌರವಿಸಿ ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಸರನ್ನು ಬದಲಿಸಿ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ ಎಂದು ಮರು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರನ್ನು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss