ಹುಬ್ಬಳ್ಳಿ ಗಲಭೆಕೋರರ ಮೇಲೆ ಕೋಕಾ ಬಳಕೆ ಮಾಡಿ: ಘಟಕ ಒತ್ತಾಯ

ಹೊಸದಿಗಂತ ವರದಿ, ಹುಬ್ಬಳ್ಳಿ :

ಅಲ್ಪಸಂಖ್ಯಾತರ ಹೆಸರಲ್ಲಿ ಮುಸ್ಲಿಮರು ನಡೆಸುತ್ತಿರುವ ದೇಶದ್ರೋಹಿ ಕೃತ್ಯ ಮತ್ತು ವ್ಯವಸ್ಥಿತ ಗಲಭೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಗಲಭೆಕೋರರ ಮೇಲೆ ಕೋಕಾ ಕಾನೂನು ಪ್ರಯೋಗಿಸುವ ಗಟ್ಟಿ ನಿಲುವು ತಳೆಯಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಉತ್ತರ ಪ್ರಾಂತ ಘಟಕ ಒತ್ತಾಯ ಮಾಡಿದೆ.
ಈ ಕುರಿತಾಗಿ ಉತ್ತರ ಪ್ರಾಂತ ಸಂಚಾಲಕ ಸೂ. ಕೃಷ್ಣಮೂರ್ತಿ , ಉ.ಪ್ರಾಂತ ಅಧ್ಯಕ್ಷ ರಾಮಚಂದ್ರ ಜಿ. ಮಟ್ಟಿ ಹೇಳಿಕೆ ನೀಡಿದ್ದಾರೆ.
ಹಲವು ವರ್ಷಗಳಿಂದ ಶಾಂತವಾಗಿದ್ದ ಹುಬ್ಬಳ್ಳಿ ನಗರದಲ್ಲಿ ಏಕಾಏಕಿ ಗಲಭೆ ಎಬ್ಬಿಸಿ ಸಾವಿರಾರು ಜನ ಪೊಲೀಸ್ ಠಾಣೆಗೆ ನುಗ್ಗಿ ಧಾಂದಲೆ ನಡೆಸಿದ್ದಾರೆ. ಪೊಲೀಸರ ಮೇಲೆಯೇ ಹಲ್ಲೆ, ದೇವಸ್ಥಾನ, ಅಂಗಡಿ ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿದ್ದು ನೋಡಿದರೆ ಕಳೆದ ವರ್ಷದ ಡಿ.ಜೆ. ಹಳ್ಳಿ- ಕೆಜೆ ಹಳ್ಳಿ ಗಲಭೆ ನೆನಪಾಗುತ್ತಿದೆ. ಹುಬ್ಬಳ್ಳಿಯದ್ದೂ ಸಹ ವ್ಯವಸ್ಥಿತ ಷಡ್ಯಂತ್ರ ಅನ್ನುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿಕೆಯಲ್ಲಿ ಅವರು ಆರೋಪ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!