ನಾವ್ಯಾಕ್ರೀ ಜಿರಳೆ ಮುಟ್ಟುತ್ತೀವಿ, ಹೊಡೆದು ಸಾಯಿಸ್ತೀವಿ ಅಷ್ಟೆ ಅಂತೀರಾ? ಅಪ್ಪಿ ತಪ್ಪಿ ಏನಾದ್ರೂ ನೀವು ಜಿರಳೆ ಮುಟ್ಟಿದ್ರೆ ತಕ್ಷಣ ಹೋಗಿ ಸೋಪು ಹಾಕಿ ಕೈ ತೊಳಿತೀರಿ. ಆದರೂ ಜಿರಳೆ ಮುಟ್ಟಿದೆ ಅನ್ನೋದು ಮನಸ್ಸಿನಲ್ಲಿ ಇದ್ದೇ ಇರತ್ತೆ. ಆದರೆ ಜಿರಳೆ ಕೂಡ ನಿಮ್ಮನ್ನು ಮುಟ್ಟಿಸಿಕೊಂಡ ಮೇಲೆ ಮೈ ಕೈ ಕ್ಲೀನ್ ಮಾಡಿಕೊಳ್ಳಂತಂತೆ!
ನಿಜವಾಗಿಯೂ ಇದು ತಮಾಷೆ ಅಲ್ಲ, ಜಿರಳೆ ತನ್ನನ್ನು ಕ್ಲೀನ್ ಮಾಡಿಕೊಳ್ಳುತ್ತದೆ. ಆದರೆ ಮನುಷ್ಯ ಅಷ್ಟು ಗಲೀಜು ಎಂದಲ್ಲ. ಮನುಷ್ಯ ಮುಟ್ಟಿದಾಗ ಬ್ಯಾಕ್ಟೀರಿಯಾಗಳು ತಾಗಿರುವ ಭಯ ಜಿರಳೆಗೆ ಇರುತ್ತದಂತೆ! ತನ್ನನ್ನು ತಾನು ಕ್ಲೀನ್ ಮಾಡಿಕೊಳ್ಳೋಕು ಜಿರಳೆ ಅದರದ್ದೇ ವಿಧಾನ ಹೊಂದಿದೆ. ಮಿಸ್ ಆಗಿ ಜಿರಳೆ ಮುಟ್ಟೋಕೆ ಮುನ್ನ ಹುಷಾರಾಗಿರಿ!