ಮೃದುವಾದ ತೆಂಗಿನಕಾಯಿ ಬರ್ಫಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಡೀರ್‌ ಅಂತ ಮನೆಗೆ ಯಾರೋ ನೆಂಟರಿಷ್ಟರು ಬಂದರೆ, ಮಕ್ಕಳು ಸಹಿ ಬೇಕು ಅಂತ ಹಠ ಮಾಡಿದಾಗ ಹತ್ತೇ ಹತ್ತು ನಿಮಿಷದಲ್ಲಿ ತೆಂಗಿನಕಾಯಿ ಬರ್ಫಿ ರೆಡಿ ಮಾಡಿ ಕೊಡಿ.

ಬೇಕಾಗುವ ಪದಾರ್ಥ:

1 ಕಪ್ ತುರಿದ ತೆಂಗಿನಕಾಯಿ
3/4 ಕಪ್ ಬೆಲ್ಲ
1 ಚಮಚ ತುಪ್ಪ
2 ಏಲಕ್ಕಿ
ತುಪ್ಪದಿಂದ ಗ್ರೀಸ್ ಮಾಡಿದ ಪ್ಲೇಟ್ ಅಥವಾ ಟ್ರೇ

ಮಾಡುವ ವಿಧಾನ:

ಮೊದಲಿಗೆ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ಹಾಗೂ ಏಲಕ್ಕಿ ಹಾಕಿ ಗ್ರೈಂಡ್‌ ಮಾಡಿ, ಅದಕ್ಕೆ ಬೆಲ್ಲ ಸೇರಿಸಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬಬಿಕೊಳ್ಳಿ, ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಚೆನ್ನಾಗಿ ಮಗುಚಿ ಪಾಕ ಗಟ್ಟಿಯಾಗುವವರೆಗೂ ಮಗುಚಿ. ನಂತರ ಒಂದು ಪ್ಲೇಟ್‌ಗೆ ತುಪ್ಪ ಸವರಿ ಅದಕ್ಕೆ ಈ ಪಾಕ ಹಾಕಿ ಸಮ ಮಾಡಿಕೊಳ್ಳಿ. ಸ್ವಲ್ಪ ತಣಿದ ಬಳಿಕ ಪೀಸ್‌ ಮಾಡಿ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!