ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ನಡುವೆ ಸಂಘರ್ಷ ಶುರುವಾಗಿದ್ದು, ಬಿಜೆಪಿಯಲ್ಲಿ ಹೊಸ ಘರ್ಷಣೆಗೆ ನಾಂದಿ ಹಾಡಿದ್ದಾರೆ.
ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಕದನದ ನಡುವೆಯೇ ರೆಡ್ಡಿ ಮತ್ತು ರಾಮುಲು ನಡುವಿನ ಕದನ ಶುರುವಾಗಿದ್ದು, ಹೈಕಮಾಂಡ್ ಗೆ ಹೊಸ ತಲೆನೋವಾಗಿದೆ. ರಾತ್ರೋರಾತ್ರಿ ರೆಡ್ಡಿ ಹಾಗೂ ರಾಮುಲು ನಡುವಿನ ಸಂಘರ್ಷ ಗಂಭೀರ ಹಂತಕ್ಕೆ ತಲುಪಿದ್ದು, ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಮುಲು ಅಸಮಧಾನ ಸ್ಫೋಟವಾಗಿದೆ
ಸಂಡೂರು ಉಪಚುನಾವಣೆಯಲ್ಲಿ ನಾನು ಸರಿಯಾಗಿ ಕೆಲಸ ಮಾಡಿದ್ದೇನೆ. ಆದರೆ ಸಂಡೂರು ಸೋಲನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದು ತ್ಯಾಗ ಮಾಡಿದ ಹಿರಿಯ ನಾಯಕ ನಾನು. ನನಗೆ ಈಗ ಪಕ್ಷದ ವೇದಿಕೆಯಲ್ಲೇ ಅಪಮಾನ ನಡೆದಿದೆ ಎಂದು ಶ್ರೀರಾಮುಲು ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್, ಜನಾರ್ದನ ರೆಡ್ಡಿ ಹಾಗೂ ವಿಜಯೇಂದ್ರ ವಿರುದ್ಧ ಸಂಘಕ್ಕೆ ಮೌಖಿಕ ದೂರು ನೀಡಿದ್ದಾರೆ.