ಹರನೂರಲ್ಲಿ ಕುಸಿದು ಬಿತ್ತು 70 ವರ್ಷದಷ್ಟು ಹಳೆಯದಾದ ಶಾಲಾ ಮೇಲ್ಚಾವಣಿ!

ಹೊಸದಿಗಂತ ವರದಿ , ಕಲಬುರಗಿ:

ಜಿಲ್ಲೆಯ ಜೇವರ್ಗಿ ತಾಲೂಕಿನ ಹರನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮೇಲ್ಚಾವಣಿ ಏಕಾಏಕಿ ಕುಸಿದ ಬಿದ್ದ ಅವಘಡ ನಡೆದಿದೆ.

ಅದೃಷ್ಟವಶಾತ್ ಮೇಲ್ಚಾವಣಿ ಕುಸಿದ ವೇಳೆ ಕೋಣೆಯಲ್ಲಿ ಯಾರು ಇರಲಿಲ್ಲ, ಹಾಗಾಗಿ ಮಕ್ಕಳು ಮತ್ತು ಶಿಕ್ಷಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

70 ವರ್ಷದಷ್ಟು ಹಳೆಯದಾದ ಕಟ್ಟಡವಾಗಿದ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮೇಲ್ಚಾವಣಿ ಸಂಪೂರ್ಣವಾಗಿ ನೆಂದು ಕುಸಿದು ಬಿದಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!