Sunday, April 18, 2021

Latest Posts

ಮುಗುಟಗೇರಿ ಸಾಮೂಹಿಕ ದಹನ ಪ್ರಕರಣ: 8ನೇ ಜೀವವೂ ಬಲಿ

ಹೊಸ ದಿಗಂತ ವರದಿ, ಮಡಿಕೇರಿ:

ಮುಗುಟಗೇರಿಯಲ್ಲಿ ಕೊಲೆ ಉದ್ದೇಶಕ್ಕಾಗಿ ನಡೆಸಿದ ಸಾಮೂಹಿಕ ದಹನ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪಣಿ ಎರವರ ಪಾಚೆ(65) ಕೂಡ ಬುಧವಾರ ಮುಂಜಾನೆ 3.35ರ ವೇಳೆ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಆ ಮೂಲಕ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕೊಲೆ ಆರೋಪಿ ಬೋಜ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರಕರಣದಲ್ಲಿ ಒಟ್ಟು ಸತ್ತವರ ಸಂಖ್ಯೆ 9ಕ್ಕೆ ಏರಿಕೆಯಾಗಿ ದಾರುಣವಾಗಿ ಕೊನೆಯಾಗಿದೆ.
ಮೃತಪಟ್ಟ ಮಹಿಳೆ ಪಾಚೆ ತೋಲನ ಪತ್ನಿ ಭಾಗ್ಯಳ ಅಜ್ಜಿಯಾಗಿದ್ದು, ಏ.3ರಂದು ಮುಗುಟಗೇರಿಯ ಮಂಜು ಎಂಬವರ ಲೈನ್‍ಮನೆಯಲ್ಲಿ ಈಕೆ ಕೂಡ ರಾತ್ರಿಯ ಗಾಢ ನಿದ್ದೆಯಲ್ಲಿದ್ದಳು.
ಮೂಲತಃ ಕೆದಮುಳ್ಳೂರು ಸಮೀಪದ ಬಾರಿಕಾಡು ಪೈಸಾರಿಯಲ್ಲಿ ವಾಸವಿದ್ದ ಪಾಚೆ ಘಟನೆ ನಡೆದ ಶನಿವಾರದಂದು ಮುಗುಟಗೇರಿ ಸಮೀಪದ ಲೈನ್ ಮನೆಯಲ್ಲಿ ವಾಸವಿರುವ ಸಂಬಂಧಿಯಾಗಿದ್ದ ಮಂಜುವಿನ ಮನೆಗೆ ಆಗಮಿಸಿದ್ದರು.
ಈಕೆಯ ಅಂತ್ಯ ಸಂಸ್ಕಾರ ಬುಧವಾರ ಹುಣಸೂರಿನಲ್ಲಿ ನೆರವೇರಿಸಲಾಗಿದೆ. ಪೆಟ್ರೋಲ್ ಸುರಿದು ಅಮಾಯಕರ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಆರೋಪಿ ಬೋಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss