ಕಾಲೇಜ್‌ ಡ್ರಾಪ್‌ ಔಟ್..ಆದರೆ ಯೂಟ್ಯೂಬ್‌ ನಲ್ಲಿ ಅತಿಹೆಚ್ಚು ಚಂದಾದರರು: ಮಿ.ಬೀಸ್ಟ್‌ ಬಗ್ಗೆ ನೀವು ತಿಳಿದಿರಬೇಕಾದ ಕತೆಯಿದು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೀವು ಯೂಟ್ಯೂಬಿನಲ್ಲಿ ಜಾಸ್ತಿ ಸಮಯ ಕಳೆಯುವವರಾಗಿದ್ದರೆ ಈ ಯೂಟ್ಯೂಬರ್‌ ನ ವೀಡಿಯೋಗಳನ್ನು ನೋಡಿರುತ್ತೀರಿ. ಇಂದು ಯೂಟ್ಯೂಬಿನಲ್ಲಿ ಅತಿ ಹೆಚ್ಚು ಆದಾಯಗಳಿಸುತ್ತಿರುವವರ ಪೈಕಿ ಈ ವ್ಯಕ್ತಿ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ಮಿ.ಬೀಸ್ಟ್‌ ಎಂಬ ಹೆಸರಿನ ಚಾನೆಲ್‌ ನಡೆಸುತ್ತಿರುವ ಡೋನಾಲ್ಡ್‌ ಸನ್‌ ಎಂಬ ಹೆಸರಿನ ಈ ವ್ಯಕ್ತಿ ಕಾಲೇಜ್‌ ಡ್ರಾಪ್‌ಔಟ್‌ ಅಂದರೆ ನೀವು ನಂಬುತ್ತೀರಾ ? ನಂಬಲೇ ಬೇಕು.

ಕಾಲೇಜು ಓದನ್ನು ಅರ್ಧಕ್ಕೇ ನಿಲ್ಲಿಸಿದ ವ್ಯಕ್ತಿಯಿಂದು ವಿಶ್ವದಲ್ಲಿಯೇ ಅತಿ ಹೆಚ್ಚು ಯೂಟ್ಯೂಬ್‌ ಆದಾಯ ಗಳಿಸುತ್ತಿದ್ದಾನೆ. ಈತ ಯೂಟ್ಯೂಬ್‌ ಜರ್ನಿ ಪ್ರಾರಂಭಿಸಿದ್ದು 2013ರಲ್ಲಿ. ಕೇವಲ 240 ಚಂದಾದಾರರೊಂದಿಗೆ 15 ವರ್ಷಗಳ ಹಿಂದೆ ಈತ ಮೊದಲ ವೀಡಿಯೋವನ್ನು ಪೋಸ್ಟ್‌ ಮಾಡಿದ್ದ. ನಂತರ 2015-16ರ ಸಮಯದಲ್ಲಿ ಈತನ ಅತ್ಯತ ಕೆಟ್ಟದಾದ ಇಂಟ್ರೋ ವೀಡಿಯೋಗಳಿಂದ ಫೇಮ್‌ ಗಳಿಸಿದ. 2017ರಲ್ಲಿ ಈತನ ಮೊದಲ ವೀಡಿಯೋ ಅತಿ ಹೆಚ್ಚು ವೈರಲ್‌ ಆಯಿತು.

ಆದರೆ ಪ್ರಸ್ತುತ ಈತ ಯೂಟ್ಯೂಬಿನಿಂದ ಅತಿ ಹೆಚ್ಚು ಆದಾಯಗಳಿಸುತ್ತಿರುವವರಲ್ಲಿ ಒಬ್ಬನಾಗಿದ್ದಾನೆ. 2021ರಲ್ಲಿ ಈತ ಯೂಟ್ಯೂಬಿನಿಂದ ಗಳಿಸಿದ ಆದಾಯ 54 ಬಿಲಿಯನ್‌ ಡಾಲರ್‌ ಗಳು. ಇದಲ್ಲದೇ ಈತನ ಬಳಿ 16 ಮಿಲಿಯನ್‌ ಚಂದಾದಾರರಿರುವ ಇನ್ನೂ 4 ಯೂಟ್ಯೂಬ್‌ ಚಾನೆಲ್‌ ಗಳಿವೆ.

ಫೋರ್ಬ್ಸ್‌ ಹೇಳಿರುವ ಪ್ರಕಾರ ಕಳೆದ ವರ್ಷದ ಈತನ ಆದಾಯವು, ಅತಿ ಹೆಚ್ಚು ಜನಪ್ರಿಯರಾಗಿರುವ ಬಿಲ್ಲಿ ಎಲಿಶ್‌, ಬಿಟಿಎಸ್‌, ಕಿಮ್‌ ಕರ್ದಾಶಿಯನ್‌, ಏಂಜಲೀನಾ ಜೂಲಿಯವರಿಗಿಂತಲೂ ಹೆಚ್ಚಿದೆ.

2016ರಲ್ಲಿ ಫುಲ್‌ ಟೈಮ್‌ ಯೂಟ್ಯೂವರ್‌ ಆಗಬೇಕೆಂಬ ಆಸೆಯಿಂದ ಕಾಳೇಜ್‌ ಓದನ್ನು ಅರ್ಧಕ್ಕೇ ನಿಲ್ಲಿಸಿ ಕಂಟೆಂಟ್‌ ಕ್ರಿಯೇಷನ್‌ ಅನ್ನು ಪ್ರಾರಂಭಿಸಿದ. ಆತನ ಕುಟುಂಬದಲ್ಲಿ ಇದಕ್ಕೆ ಒಪ್ಪಿಗೆಯಿರಲಿಲ್ಲ. ಆದರೂ ಆತ ಮನೆಯಿಂದಲೇ ಹೊರಬಂದು ಯೂಟ್ಯೂಬ್‌ ಬೆನ್ನತ್ತಿದ. 2018 ರ ವೇಳೆಗೆ ಈತ ಅತಿದೊಡ್ಡ ಯೂಟ್ಯೂಬ್‌ ಸಮಾಜ ಸೇವಕ್‌ ಎಂಬ ಖ್ಯಾತಿ ಗಳಿಸಿದ. ಈಗಲೂ ಯೂಟ್ಯೂಬ್‌ ವೀಡಿಯೋಗಳ ಮೂಲಕ ಆತ ಹಲವಾರು ಸಾಮಾಜಿಕ ಕೆಲಸಗಳಿಗೆ ನೆರವಾಗುತ್ತಿದ್ದಾನೆ. ಹತ್ತು ಹಲವು ಸಮಾಜಸೇವಾ ಸಂಸ್ಥೆಗಳಿಗೆ ದೇಣಿಗೆ ಸಂಗ್ರಹಿಸಲು ಕೊಡುಗೆ ನೀಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!