ಶ್ರೀಲಂಕಾದಲ್ಲಿ ಕೆಜಿ ಸೇಬಿನ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೊಲಂಬೊ: ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಶ್ರೀಲಂಕಾದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳು ಒಂದೇ ಸಮನೆ ಏರುತ್ತಿವೆ.

ಮೂರು ನಾಲ್ಕು ತಿಂಗಳ ಹಿಂದೆ ಸೇಬು ಒಂದು ಕೆ.ಜಿ.ಗೆ ₹ 500 ಕ್ಕೆ ಮಾರಾಟವಾಗುತ್ತಿತ್ತು. ಈಗ ಅದು ₹ 1000 ಕ್ಕೆ ಏರಿಕೆಯಾಗಿದೆ. ಈ ಮೊದಲು ಪಿಯರ್ ಹಣ್ಣು ಒಂದು ಕೆ.ಜಿ.ಗೆ ₹ 700 ಕ್ಕೆ ಮಾರಾಟವಾಗುತ್ತಿದ್ದರೆ, ಅದೀಗ ₹ 1500 ಕ್ಕೆ ಹೆಚ್ಚಳವಾಗಿದೆ. ಜನರ ಬಳಿ ಹಣವಿಲ್ಲದೇ ಖರೀದಿಸಲೂ ಹಿಂದೇಟು ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!