ದೊಡ್ಡ ಕರುಳು ಕ್ಯಾನ್ಸರ್‌ನ ಲಕ್ಷಣಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾನವ ದೇಹದಲ್ಲಿ ದೊಡ್ಡ ಕರುಳಿನ ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ಜೀರ್ಣಾಂಗವ್ಯೂಹದ ಕೊನೆಯಲ್ಲಿರುವ ದೊಡ್ಡಕರುಳು ಆಹಾರದಲ್ಲಿನ ನೀರು, ಪೊಟ್ಯಾಸಿಯಮ್‌. ಲವಣಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳನ್ನು ಹೀರಿಕೊಂಡು ಅವುಗಳನ್ನು ದೇಹಕ್ಕೆ ಒದಗಿಸುತ್ತದೆ. ಇದು ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಸಹ ಸಹಾಯ ಮಾಡುತ್ತದೆ. ದೊಡ್ಡಕರುಳಿಗೂ ಸಣ್ಣದಿರಿಂದ ಹಿಡಿದು ಮಾರಣಾಂತಿಕ ಕ್ಯಾನ್ಸರ್ ವರೆಗೆ ಅನೇಕ ಸಮಸ್ಯೆಗಳನ್ನು ಕಾಣಬಹುದು. ರೋಗಗಳನ್ನು ಮೊದಲೇ ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.

ಮಲಬದ್ಧತೆ ತೀವ್ರವಾಗಿದ್ದರೂ ಅತಿಸಾರವು ನಿಲ್ಲದೆ ಇದ್ದರೆ, ಹೊಟ್ಟೆಯಲ್ಲಿ ನೋವು ಉಂಟಾದಾಗ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಕೊಲೊನೋಸ್ಕೋಪಿ ಮಾಡಿಸಿಕೊಳ್ಳುವುದರಿಂದ ಸಮಸ್ಯೆಯನ್ನು ನಿರ್ಣಯಿಸಬಹುದು. ವಾಕರಿಕೆ/ವಾಂತಿ, ಕ್ರಮೇಣ ತೂಕ ನಷ್ಟ, ಹೊಟ್ಟೆ ನೋವು, ಗ್ಯಾಸ್‌ ಇಂತಹ ಸಮಸ್ಯೆ ಹೆಚ್ಚಾಗಿದ್ದರೆ, ವೈದ್ಯರ ಸಂಪರ್ಕಿಸಬೇಕು.

ಬೊಜ್ಜು, ಜಂಕ್ ಫುಡ್ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯು ಕರುಳಿನ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳು ಎಂದು ವೈದ್ಯರು ಹೇಳುತ್ತಾರೆ. ಕುಟುಂಬದ ಸದಸ್ಯರಲ್ಲಿ ಯಾರಾದರೂ ಈ ಹಿಂದೆ ಇದೇ ರೀತಿಯ ಸಮಸ್ಯೆಗಳನ್ನು ಹೊಂದಿದ್ದರೆ, ಯಾವುದೇ ವಿಳಂಬವಿಲ್ಲದೆ ಕೊಲೊನೋಸ್ಕೋಪಿಯನ್ನು ನಡೆಸಬೇಕು. ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮೂಲಕ ರೋಗವನ್ನು ನಿಯಂತ್ರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!