spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಲ್ಯದಲ್ಲಿ ಕಂಡ ಬಣ್ಣ ಬಣ್ಣದ ಐಸ್ ಕ್ರೀಮ್ ಡಬ್ಬಿ ಈತನ ಬದುಕನ್ನೇ ಬದಲಿಸಿತು ನೋಡಿ!

- Advertisement -Nitte
  • ಹಿತೈಷಿ

ಬಾಲ್ಯದಲ್ಲಿ ಡಾಕ್ಟರ್, ಇಂಜಿನಿಯರ್, ಟೀಚರ್ ಆಗುವ ಆಸೆ ಎಲ್ಲರಲ್ಲೂ ಇದ್ದಿರುತ್ತೆ. ಅದರೆ ನಾನೊಂದು ಐಸ್ ಕ್ರೀಮ್ ಅಂಗಡಿ ತೆರೆಯಬೇಕು ಎಂದು ಕನಸು ಕಂಡವನ ಕಥೆ ಕೇಳಿದ್ದೀರಾ? ಈತ ಕೇವಲ ಹಾಗೊಂದು ಕನಸು ಕಂಡ ಹುಡುಗ ಅಲ್ಲ, ಅದನ್ನ ಛಲದಿಂದ ಸಾಧಿಸಿ ಇಂದು ಲಕ್ಷಾಂತರ ರೂ. ದುಡಿಯುವ ಉದ್ಯಮವಾಗಿಸಿದ ಸಾಹಸಿ!

ಹೌದು, ಚೆನ್ನೈ ಮೂಲದ ಭರತ್ ಜಯಂತ್ (32) ಗೆ ಎಳವೆಯಿಂದಲೂ ವಾಹನದಲ್ಲಿ ಐಸ್ ಕ್ರೀಮ್ ಅಂಗಡಿ ತೆರೆಯುವ ಕನಸು. ಇದಕ್ಕಾಗಿ ಇಷ್ಟ ಪಟ್ಟು ಸೇರಿಕೊಂಡಿದ್ದ ಸಿನಿಮಾ ಜಗತ್ತಿಗೆ ಗುಡ್ ಬೈ ಹೇಳಿ, ಪ್ರಾರಂಭಿಸಿದ್ದು ‘ಐಸ್ ಕ್ರೀಮ್ ಟ್ರಕ್’.

Boondi Chaach To Gajar Halwa: Chennai Boys Blaze A Trail With Ice Popsicle Food Truck

ಬನ್ನಿ, ಈತನ ಐಸ್ ಕ್ರೀಮ್ ಟ್ರಕ್ ಗೆ ಒಂದು ರೌಂಡ್ ಹೋಗಿ ಬರೋಣ..

ಕನಸು ಕಂಡಿದ್ದೇನು?

ಭರತ್’ಗೆ ಬಾಲ್ಯದಿಂದಲೂ ಕಾರ್ಟೂನ್, ಬಣ್ಣ ಬಣ್ಣದ ಚಿತ್ರಗಳೆಂದರೆ ತುಂಬಾ ಇಷ್ಟ. ಆಗಿಂದಲೂ ನಾನೊಂದು ಮಕ್ಕಳಿಗೆ ಇಷ್ಟವಾಗುವ ಹಾಗೆ ಐಸ್ ಕ್ರೀಮ್ ಅಂಗಡಿ ಪ್ರಾರಂಭಿಸಲೇಬೇಕು ಎಂದು ಕನಸು ಕಂಡಿದ್ದರು ಭರತ್.

ಉದ್ಯೋಗ ಇರ್ಲಿಲ್ವಾ?
ಐಸ್ ಕ್ರೀಂ ಅಂಗಡಿ ಆಸೆ ಕಂಡಿದ್ದಾರೆ ಎಂದಾಕ್ಷಣ ಇವರು ಶಿಕ್ಷಣ ಪಡೆದಿಲ್ಲ ಅಂತ ಅಲ್ಲ. ಇವರು ವಿಶುವಲ್ ಕಮ್ಯುನಿಕೇಷನ್ ವಿಭಾಗದಲ್ಲಿ ಡಿಗ್ರೀ ಪೂರೈಸಿದ್ದು, ಬರೋಬ್ಬರಿ 30 ಸೀರಿಯಲ್ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಶುರು ಮಾಡೋದು ತುಂಬಾ ಸುಲಭವಾಗಲಿಲ್ಲ. ವಾಹನದಲ್ಲಿ ಆಹಾರ ಮಾರಾಟ ಮಾಡೋದು ಚೆನ್ನೈ ನಲ್ಲಿ ಹೊಸ ಕಲ್ಪನೆಯಾಗಿದ್ದು, ಅಧಿಕಾರಿಗಳಿಂದ ಅನುಮತಿ ಪಡೆಯೋಕೆ ದಿನಗಟ್ಟಲೆ ಅಲೆಯಬೇಕಿತ್ತು ಎನ್ನುತ್ತಾರೆ ಜೆಸ್ವಿನ್ ಪ್ರಭು.

ಸ್ಟಾರ್ಟ್ ಅಪ್ ಪ್ಲಾನ್ ಹೇಗೆ?
ಮೂಲತಃ ತಮಿಳುನಾಡಿನವರಾದ ಭರತ್, 2018 ತಮ್ಮ ವೃತ್ತಿ ಜೀವನದಿಂದ ಹೊರಬಂದು ತಮ್ಮ ಬಾಲ್ಯದ ಕನಸನ್ನು ನನಸಾಗಿಸಲು ಮುಂದಾದರು. ಇದಕ್ಕೆ ಅವರ ಸ್ನೇಹಿತ ಜೆಸ್ವಿನ್ ಪ್ರಭು ಸಹಾಯ ಪಡೆದು ಹೊಸ ಸ್ಟಾರ್ಟ್ ಅಪ್ ಶುರು ಮಾಡಿಯೇಬಿಟ್ಟರು.

ಏನು ವಿಶೇಷತೆ?
ಈ ಐಸ್ ಕ್ರೀಂ ಅಂಗಡಿ ಹೆಸರು ‘ಟಿಕಲ್ ಟ್ರಕ್’, ಅಂದರೆ ಜನರ ರುಚಿಗೆ ತಕ್ಕಂತೆ ಈ ಐಸ್ ಕ್ರೀಮ್ ಗಳನ್ನು ರೂಪಿಸಲಾಗಿದೆ. ಇಲ್ಲಿ ಡಜನ್ ಗಟ್ಟಲೆ ಫ್ಲೇವರ್ ಗಳಲ್ಲಿ ಐಸ್ ಕ್ಯಾಂಡಿ ಸಿಗಲಿದೆ. ಜೊತೆಗೆ ಕಬ್ಬು, ಜಾಮೂನ್, ಬೂಂದಿ ಮೊಸರು, ಸ್ಟ್ರಾಬೆರಿ, ಗಾಜರ್ ಹಲ್ವಾ, ಕಾಕ್ ಟೇಲ್ ಕೂಡ ಸಿಗಲಿದ್ದು ಸಖತ್ ಫೇಮಸ್ ಆಗಿದೆ.

Index of /wp-content/uploads/2019/03/

ಫಂಡಿಂಗ್ ಹೇಗೆ?
ಭರತ್, ಅವರ ಸ್ನೇಹಿತ ಜೆಸ್ವಿನ್ ಹಾಗೂ ಶಾನ್ಮುಗ ಪಾಂಡಿಯನ್ ಜೊತೆ ಸೇರಿ ಐಸ್ ಕ್ರೀಮ್ ಟ್ರಕ್ ಶುರು ಮಾಡಲು ಮುಂದಾದರು. ಇದರ ಬ್ಯುಸಿನೆಸ್ ಗೆ ಅಂತ 12 ಲಕ್ಷ ರೂ. ಸಾಲ ಪಡೆದರು. ಇಲ್ಲಿನ ಒಂದೊಂದು ಐಸ್ ಕ್ರೀಮ್ ರೇಟ್ 30-70ರೂ.ಗೆ ಸಿಗಲಿದೆ.

Popsicles At The Tickle Truck In Besant Nagar | LBB, Chennai

ಐಸ್ ಕ್ರೀಮ್ ಅಂಗಡಿ ತೆರದರೇನೋ ಸರಿ, ಆದರೆ ಈ ಟ್ರಕ್ ನಲ್ಲಿ ವಿದ್ಯುತ್ ಸಂಪರ್ಕ ಪಡೆಯೋದೆ ದೊಡ್ಡ ಸವಾಲಾಗಿತ್ತು. 6 ಗಂಟೆಗೂ ಹೆಚ್ಚು ಹೊತ್ತು ಐಸ್ ಕ್ರೀಮ್ ಅನ್ನು ಶೇಕರಿಸೋದು ತುಂಬಾ ಕಷ್ಟ ಆಗಿತ್ತು. ಹಾಗಾಗಿ ಇವರು ತಮ್ಮ ಕೆಲಸದ ಅವಧಿಯನ್ನು ಸಂಜೆಗೆ ಶಿಫ್ಟ್ ಮಾಡಿದರು. ಇದರಿಂದ ಸ್ವಲ್ಪ ಹೆಚ್ಚು ಹೊತ್ತು ಐಸ್ ಕ್ರೀಮ್ ತಂಪಾಗಿರುತ್ತದೆ.

Chennai’s very own ice cream truck

ಆರಂಭವಾಗಿದ್ದು ಯಾವಾಗ?
ಮೂವರು ಜೊತೆ ಸೇರಿ 2018ರಲ್ಲಿ ಸ್ಟಾರ್ಟ್ ಅಪ್ ಆರಂಭಿಸಲು ಮುಂದಾದರು. ಆದರೆ ಇವರಿಗೆ ಕುಕ್ಕಿಂಗ್ ಬಗ್ಗೆ ಹೆಚ್ಚು ಗೊತ್ತಿಲ್ಲದ ಕಾರಣ ಕೆಲವು ಚೆಫ್ ಗಳ ಸಂಪರ್ಕ ಮಾಡಿ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಐಸ್ ಕ್ರೀಮ್ ತಯಾರಿಕೆ ಕ್ಲಾಸ್ ಶುರು ಮಾಡಿದರು. ನಂತರ ಸಮಾಜದ ಜೊತೆಗೆ ಸ್ವಲ್ಪ ಬಾಂಧವ್ಯ ಬಂದ ನಂತರ 2019ರಲ್ಲಿ ಚೆನ್ನೈ ನ ಬೆಸಂತ್ ನಗರದ ಬೀಚ್ ನ ಬಳಿ ಐಸ್ ಕ್ರೀಮ್ ಟ್ರಕ್ ಇರಿಸಿ, ಕಂಡ ಕನಸು ನನಸು ಮಾಡಿಕೊಂಡರು.

ಲಾಭ ಹೇಗೆ?
ಐಸ್ ಕ್ರೀಮ್ ಟ್ರಕ್ ನಿಂದ ತಿಂಗಳಿಗೆ 2 ಲಕ್ಷ ರೂ. ಮಾರಾಟವಾಗಲಿದ್ದು, 60 ಸಾವಿರ ರೂ. ಗಳಷ್ಟು ಲಾಭ ಗಳಿಸಲಿದ್ದಾರಂತೆ.  ಈ ಟಿಕಲ್ ಟ್ರಕ್ ನಿಂದ ಸ್ಥಳೀಯ ವ್ಯಾಪಾರಿಗಳಿಗೆ ಲಾಭ ಕಡಿಮೆಯಾಗಿದ್ದು, ಹೊಸ ಪ್ರಯತ್ನಕ್ಕೆ ಜನರು ಮೆಚ್ಚುಗೆ ಪಡೆಯುತ್ತಿರೋದು ಸಖತ್ ಖುಷಿ ತಂದಿದೆ ಎನ್ನುತ್ತಾರೆ ಭರತ್.

Beep beep, here come food trucks to serve a feast - DTNext.in

ಕೆಲವೊಮ್ಮೆ ನಾವೆಲ್ಲರೂ ಹಣ ಸಂಪಾದನೆ ಮಾಡುವ ನೆಪದಲ್ಲಿ ನಮ್ಮ ಕನಸನ್ನು ಮರೆತು ಬಿಡುತ್ತೇವೆ. ಆದರೆ ನೆನಪಿಡಿ ನಿಮ್ಮ ಹೊಸ ಆವಿಷ್ಕಾರಕ್ಕೆ ಜನತೆ ಉತ್ತಮ ಸ್ಪಂದನೆ ಕೊಡುತ್ತಾರೆ. ಆದರೆ ಇದಕ್ಕೆ ನಾವು ಎಷ್ಟರ ಮಟ್ಟಿಗೆ ಕಮಿಟ್ ಆಗಿರುತ್ತೇವೆ ಅನ್ನೋದು ಮುಖ್ಯವಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss