ಬನ್ನಿ ಅಮೇಠಿಯಿಂದ ಸ್ಪರ್ಧಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ(Uttar Pradesh) ಅಮೇಠಿ ಲೋಕಸಭಾ (Amethi Lok Sabha) ಕ್ಷೇತ್ರದಲ್ಲಿ ಮತ್ತೆ ರಾಜಕೀಯ ಮುಖಾಮುಖಿ ನಡೆಯುವ ಲಕ್ಷಣ ಗೋಚರಿಸುತ್ತಿದೆ.

ಇದಕ್ಕೆ ಕಾರಣ ಕೇಂದ್ರ ಸಚಿವೆ ಹಾಗೂ ಹಾಲಿ ಸಂಸದೆ ಸ್ಮೃತಿ ಇರಾನಿ (Smriti Irani) ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಅಮೇಠಿಯಿಂದ ಸ್ಪರ್ಧಿಸುವಂತೆ ಸೋಮವಾರ ಸವಾಲು ಹಾಕಿದ್ದಾರೆ.

ಅಮೇಠಿಯ ಮಾಜಿ ಸಂಸದ ವಯನಾಡಿನ ಹಾಲಿ ಸಂಸದ ರಾಹುಲ್ ಅಮೇಠಿ ಜನರಿಗೆ ಅವಮಾನ ಮಾಡಿದ್ದಾರೆ. ಅಮೇಠಿ ಸಂಕಷ್ಟಕ್ಕೆ ಸಿಲುಕಿದೆ. ರಾಮ್ ಲಲಾ ಪ್ರತಿಷ್ಠಾಪನೆಯ ಆಹ್ವಾನವನ್ನು ರಾಹುಲ್ ಮತ್ತು ಅವರ ಕುಟುಂಬ ತಿರಸ್ಕರಿಸಿದೆ. ಇದರಿಂದಲೂ ಅಮೇಠಿ ಸಂಕಷ್ಟಕ್ಕೆ ಸಿಲುಕಿದೆ.ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಏಕಾಂಗಿಯಾಗಿ ಸ್ಪರ್ಧಿಸಲು ನಾನು ಅವರಿಗೆ (ರಾಹುಲ್) ಸವಾಲು ಹಾಕುತ್ತೇನೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ .

ಇಂದು ನ್ಯಾಯ ಯಾತ್ರೆಯ ಬೆಂಗಾವಲು ಪಡೆ ಪಟ್ಟಣಕ್ಕೆ ಆಗಮಿಸಿದಾಗ ಅದನ್ನು ಖಾಲಿ ಬೀದಿಗಳಲ್ಲಿ ಸ್ವಾಗತಿಸಿದ್ದರಿಂದ ಅಮೇಠಿಯ ಜನರು ರಾಹುಲ್ ಗಾಂಧಿಯವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕೋಪಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕನನ್ನು ವ್ಯಂಗ್ಯವಾಡಿದ್ದಾರೆ

 

 

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!