ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ ಸ್ಟಾಗ್ರಾಂ ನ ರೀಲ್ಸ್ ಗಳಲ್ಲಿ ಇತ್ತೀಚಿಗೆ ಭಾರೀ ಬೇಡಿಕೆ ಪಡೆದುಕೊಂಡಿರುವ ಮನಿಕೆ ಮಗೆ ಹಿತೆ ಹಾಡು ಈಗ ಮತ್ತೊಂದು ರೀತಿಯಲ್ಲಿ ವೈರಲ್ ಆಗುತ್ತಿದೆ.
ಸಾಕಷ್ಟು ಮಂದಿ ತಮ್ಮ ಇಷ್ಟದ ಹಾಡನ್ನು ಹಾಡುತ್ತಾ, ಡ್ಯಾನ್ಸ್ ಮಾಡುವ ವಿಡಿಯೋ ಪೋಸ್ಟ್ ಮಾಡುತ್ತಾರೆ. ಹಾಗೆ ಇಲ್ಲೊಬ್ಬ ವ್ಯಕ್ತಿ ಮನಿಕೆ ಮಗೆ ಹಿತೆ ಹಾಡನ್ನು ಹಾಡುವ ವಿಡಿಯೋ ಸಖತ್ ವೈರಲ್ ಆಗಿದೆ.
ಈ ಹಾಡು ಪ್ಲೇ ಆಗುತ್ತಿದ್ದಂತೆ ಆತ ಹಾಡಿನ ಲಿರಿಕ್ ಹಾಗೂ ಉಚ್ಛಾರಣೆ ಬರದಿದ್ದರು ಹಾಡನ್ನು ತನ್ನದೇ ಭಾಷೆಯಲ್ಲಿ ಹಾಡಿದ್ದಾನೆ. ಈ ತಮಾಷೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಈ ವಿಡಿಯೋವನ್ನು 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರು ವಿಡಿಯೋ ನೋಡಿ ನಕ್ಕು ನಕ್ಕೂ ಸುಸ್ತಾಗಿದ್ದಾರೆ.