ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………..
ಹೊಸದಿಗಂತ ಆನ್ಲೈನ್ ಡೆಸ್ಕ್:
ಎಲ್ಪಿಜಿ ಗ್ಯಾಸ್ ತನ್ನ ಬೆಲೆಯನ್ನು ಕಡಿತ ಮಾಡಿದ್ದು, ಗ್ಯಾಸ್ ಕಂಪನಿಗಳು ಕಮರ್ಷಿಯಲ್ ಬಳಕೆಗೆ ಉಪಯೋಗಿಸಲ್ಪಡುವ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 45.50 ರೂಪಾಯಿ ಕಡಿತಗೊಳಿಸಿದೆ. ಆದರೆ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ಗಳ ದರದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ.
ಗೃಹೋಪಯೋಗಿ ಸಿಲಿಂಡರ್ ಅಂದರೆ 14 .2 ಕೆಜಿ ತೂಕವುಳ್ಳ ಗ್ಯಾಸ್ ಸಿಲಿಂಡರ್ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್ ತಿಂಗಳ ಮೊದಲ ಭಾಗದಲ್ಲಿ ಗೃಹೋಪಯೋಗಿ ಸಿಲಿಂಡರ್ಗಳ ದರದಲ್ಲಿ 10 ರೂಪಾಯಿ ಕಡಿತ ಮಾಡಲಾಗಿತ್ತು.
ಇಂಡೇನ್ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಪರಿಷ್ಕೃತ ದರ 1641 ರೂಪಾಯಿ ಬದಲು 1595.50 ರೂಪಾಯಿ ಆಗಿದೆ. ಮುಂಬೈನಲ್ಲಿ 1590.50 ರೂಪಾಯಿಗಳ ಬದಲು ಇನ್ಮೇಲೆ 1545 ರೂಪಾಯಿ ಪಾವತಿಸಿದ್ರೆ ಸಾಕು. ಇನ್ನು ಕೊಲ್ಕತ್ತಾದಲ್ಲಿ 1713 ದರದಲ್ಲಿ ಇಳಿಕೆ ಮಾಡಿ 1667.50 ರೂಪಾಯಿ ನಿಗದಿ ಮಾಡಲಾಗಿದೆ.