ಶೀಘ್ರವೇ ನಮ್ಮ ಮೆಟ್ರೋದಲ್ಲಿ ಬರಲಿದೆ ಕಾಮನ್ ಮೊಬಿಲಿಟಿ ಕಾರ್ಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಟ್ರೋಗಳಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್ (National Common Mobility Card – NCMC) ಪರಿಚಯಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ನಿಗಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರವು ಆರಂಭಿಸಿರುವ ‘ಒಂದು ದೇಶ ಒಂದು ಕಾರ್ಡ್​’ ಯೋಜನೆಯ ಭಾಗವಾಗಿ ಹೊಸ ಕಾರ್ಡ್​ಗಳನ್ನು ಪರಿಚಯಿಸಲಾಗುವುದು ಎಂದು. ಈ ಸಾರಿಗೆ ಕಾರ್ಡ್​ಗಳನ್ನು ವಿವಿಧ ರಾಜ್ಯಗಳ ಸಾರಿಗೆ ನಿಗಮಗಳಲ್ಲಿ ಹಾಗೂ ಮೆಟ್ರೋ ಮತ್ತಿತರ ಸಾರಿಗೆ
ವ್ಯವಸ್ಥೆಗಳಲ್ಲಿ ಈ ಬಳಸಬಹುದು. ಬೆಂಗಳೂರಿನಲ್ಲಿ 2023ರಿಂದ ಈ ಕಾರ್ಡ್​ಗಳನ್ನು ಜಾರಿಗೊಳಿಸಲಾಗುವುದು ಎಂದು ನಿಗಮವು ಹೇಳಿದೆ.

ಮುಂಬೈ ಮೆಟ್ರೋ ನಿಗಮವು ಕಾಮನ್ ಮೊಬಿಲಿಟಿ ಕಾರ್ಡ್​ಗಳನ್ನು ಈ ತಿಂಗಳ ಆರಂಭದಲ್ಲಿ ಪರಿಚಯಿಸಿತ್ತು. ಆದರೆ ಬೆಂಗಳೂರಿನಲ್ಲಿ ಈ ಯೋಜನೆ ಆರಂಭವಾಗಲಿದೆ ಎಂಬ ಮಾತುಗಳು ಬಹಳ ಹಿಂದಿನಿಂದ ಕೇಳಿಬರುತ್ತಿತ್ತು. ಈ ಯೋಜನೆ ಆರಂಭವಾದರೆ ಒಂದೇ ಕಾರ್ಡ್ ಅನ್ನು ಬಿಎಂಟಿಸಿ ಬಸ್ ಹಾಗೂ ಮೆಟ್ರೋ ರೈಲಿಗೆ ಬಳಸಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2019ರಲ್ಲಿ ಈ ಕಾರ್ಡ್​ಗೆ ಚಾಲನೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!