ಕಾಮನ್​​​ವೆಲ್ತ್​ ಫೆನ್ಸಿಂಗ್​​ ಚಾಂಪಿಯನ್​ಶಿಪ್​​: ಚಿನ್ನ ಗೆದ್ದ ಸಂಭ್ರಮಿಸಿದ ಭಾರತದ ಭವಾನಿ ದೇವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಮನ್​​​ವೆಲ್ತ್​ ಫೆನ್ಸಿಂಗ್​​ ಚಾಂಪಿಯನ್​ಶಿಪ್​​ನಲ್ಲಿ ಭಾರತದ ಫೆನ್ಸರ್​ ಸ್ಪರ್ಧಿ ಭವಾನಿ ದೇವಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ವೈಯಕ್ತಿಕ ಸೇಬರ್​ ವಿಭಾಗದ ಫೈನಲ್​​​​ನಲ್ಲಿ ಆಸ್ಟ್ರೇಲಿಯಾದ ಎರಡನೇ ಶ್ರೇಯಾಂಕಿತ ವರೋನಿಕಾ ವೇಸ್​ಲೆವಾ ವಿರುದ್ಧ 15-10ರ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಕಳೆದ ಬಾರಿ ಗೆದ್ದಿದ್ದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು.

ವಿಶ್ವದ 42ನೇ ಶ್ರೇಯಾಂಕದಲ್ಲಿರುವ ಫೆನ್ಸರ್​ ಭವಾನಿ, ಕಾಮನ್​​​ವೆಲ್ತ್​ ಫೆನ್ಸಿಂಗ್​​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿರುವ ಕಾರಣ ಇದೀಗ ಮುಂಬರುವ ಒಲಿಂಪಿಕ್ಸ್​​ಗೆ ಅರ್ಹತೆಯನ್ನೂ ಪಡೆದುಕೊಂಡಿದ್ದಾರೆ.

ಭಾರತದಿಂದ ಫೆನ್ಸಿಂಗ್‌ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಭವಾನಿ ದೇವಿ ಪಾತ್ರರಾಗಿದ್ದರು. ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಭವಾನಿ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಸಿಕ್ಕಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!