Tuesday, August 9, 2022

Latest Posts

ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಮತ್ತೊಂದು ಚಿನ್ನ: ಪದಕ ಪಟ್ಟಿಯಲ್ಲಿ ಭಾರೀ ಜಿಗಿತ ಕಂಡ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವು ಅದ್ಭುತ ಪ್ರದರ್ಶನ ನೀಡುತ್ತಿದೆ. ಪಂದ್ಯವಳಿಯ ಮೂರನೇ ದಿನ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ 73 ಕೆಜಿ ವಿಭಾಗದಲ್ಲಿ ಭಾರತದ ಮೂರನೇ ಚಿನ್ನವನ್ನು ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ ಆರಕ್ಕೇರಿದೆ.
ಮೊದ ಬಾರಿಗೆ ಟೂರ್ನಿಯಲ್ಲಿ ಭಾಗಿಯಾಗಿರುವ 20 ವರ್ಷದ ಶೆಯುಲಿ 313 ಕೆಜಿ (143 ಕೆಜಿ+170 ಕೆಜಿ) ಬಾರವನ್ನು ಎತ್ತುವ ಮೂಲಕ ಚಿನ್ನ ಗೆದ್ದರು. ಅದಕ್ಕೂ ಮುನ್ನ ವೇಟ್‌ಲಿಫ್ಟಿಂಗ್‌ ವಿಭಾದಗದಲ್ಲಿಯೇ ಜೆರೆಮಿ ಲಾಲ್ರಿನ್ನುಂಗಾ 67 ಕೆಜಿ 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇವರು ಸ್ನ್ಯಾಚ್‌ನಲ್ಲಿ 140 ಕೆಜಿ ಹಾಗೂ ಜರ್ಕ್ ನಲ್ಲಿ 160 ಕೆಜಿ ತೂಕವನ್ನು ಎತ್ತಿದರು. ಕೊನೆಯ ಸುತ್ತಿನಲ್ಲಿ ಬರೋಬ್ಬರಿ 300 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದು ಬೀಗಿದರು.

ಭಾರತಕ್ಕೆ ಆರು ಚಿನ್ನ:

ವೆಟ್‌ ಲಿಪ್ಟಿಂಗ್‌ ವಿಭಾಗದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿರುವ ಭಾರತ ಒಟ್ಟರೆಯಾಗಿ 6 ಚಿನ್ನದ ಪದಕಗಳನ್ನು ಗಳಿಸಿಕೊಟ್ಟಿದೆ. ಸಾಯಿಖೋಮ್ ಮೀರಾಬಾಯಿ ಚಾನು (ಚಿನ್ನ), ಸಂಕೇತ್ ಮಹಾದೇವ್ ಸರ್ಗರ್ ಮತ್ತು ಬಿಂದ್ಯಾರಾಣಿ ದೇವಿ (ಬೆಳ್ಳಿ) ಮತ್ತು ಗುರುರಾಜ ಪೂಜಾರಿ (ಕಂಚಿನ) ಟೂರ್ನಿಯ ಪದಕ ವೀರರಾಗಿದ್ದಾರೆ. ಆಭನುವಾರ ನಡೆದ ಇತರ ವಿಭಾಗಗಳ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನವನ್ನು  ಎಂಟು ವಿಕೆಟ್‌ಗಳಿಂದ ಸೋಲಿಸಿದೆ.  ಪುರುಷರ ಹಾಕಿ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಘಾನಾ ವಿರುದ್ಧ 11-0 ಅಂತರದ ಅಮೋಘ ಜಯ ಸಾಧಿಸಿತು. ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಜಯಗಳಿಸುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಕಾಯ್ದಿರಿಸಿದೆ. ಪುರುಷರ ಟೇಬಲ್ ಟೆನಿಸ್ ತಂಡವು ಬಾಂಗ್ಲಾದೇಶದ ವಿರುದ್ಧ ಸುಲಭ ಗೆಲುವಿನೊಂದಿಗೆ ಮುಂದಡಿ ಇಟ್ಟಿದೆ. ಬಾಕ್ಸಿಂಗ್ ತಾರೆ ನಿಖತ್ ಜರೀನ್ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದಾರೆ. ಆದರೆ ಮತ್ತೊಬ್ಬ ಭಾಕ್ಸರ್ ಶಿವ ಥಾಪಾ ಭಾರೀ ಫೈಪೋಟಿಯ ಪಂದ್ಯದಲ್ಲಿ ಸೋತರು.
ಭಾರತಕ್ಕೆ ಐದನೇ ಸ್ಥಾನ:
ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಭಾರತ (ಆರು ಪದಕಗಳು) ಗಳಿಸಿರುವ ಆಭರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.. ಆಸ್ಟ್ರೇಲಿಯಾ 50 ಪದಕಗಳೊಂದಿಗೆ (20 ಚಿನ್ನ, 13 ಬೆಳ್ಳಿ, 17 ಕಂಚು) ಅಗ್ರಸ್ಥಾನದಲ್ಲಿ ಮುಂದುವರಿದಿದೆ. 12 ಚಿನ್ನ ಸೇರಿದಂತೆ 34 ಅಂಕಗಳೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. 10 ಚಿನ್ನ 3 ಬೆಳ್ಳಿ ಪದಕಗಳೊಂದಿಗೆ 19 ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss