ಕಾಮನ್ ವೆಲ್ತ್ ಗೇಮ್ಸ್: ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಅಂಕಿತಾ ಸುರೇಶ್

ಹೊಸದಿಗಂತ ವರದಿ ಮಡಿಕೇರಿ:
ಇಂಗ್ಲೆಂಡ್’ನ ಬರ್ಮಿಂಗ್’ಹ್ಯಾಮ್’ನಲ್ಲಿ ಜುಲೈ 28ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ 22ನೇ ಕಾಮನ್ ವೆಲ್ತ್ ಗೇಮ್ಸ್’ನ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಹಾಕಿ ಪ್ರತಿಭೆ ಅಂಕಿತಾ ಸುರೇಶ್ ಅವರು ನಿಯುಕ್ತಿಗೊಂಡಿದ್ದಾರೆ.

ಅಂಕಿತಾ ಸುರೇಶ್ ಅವರು ಸಹಾಯಕ ಕೋಚಿಂಗ್’ನ ಹೊಣೆಯೊಂದಿಗೆ ತಂಡದ ಮ್ಯಾನೇಜರ್ ಆಗಿ ಕೂಡಾ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಲುಪಿ ತಾಲೀಮ್’ನಲ್ಲಿ ತೊಡಗಿರುವ ಭಾರತ ಮಹಿಳಾ ಹಾಕಿ ತಂಡವು ಮೊದಲ ಪಂದ್ಯದಲ್ಲಿ ಘಾನ ದೇಶದ ತಂಡವನ್ನು ಎದುರಿಸಲಿದೆ. ಅಂಕಿತಾ ಸುರೇಶ್ ಅವರಿಂದ ತರಬೇತಿ ಪಡೆದ ಭಾರತ ಮಹಿಳಾ ತಂಡದ ಹಾಕಿ ಕಲಿಗಳು ಕಳೆದ ವರ್ಷ (2021ರಲ್ಲಿ) ಜಪಾನಿನ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್’ನಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮೂಲತಃ ಮಡಿಕೇರಿಯವರಾಗಿರುವ ಅಂಕಿತಾ ಸುರೇಶ್ ಅವರು ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!