ಕಾಮನ್‌ವೆಲ್ತ್‌ ಗೇಮ್ಸ್: ಟ್ರಿಪಲ್‌ ಜಂಪ್‌ ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಕೇರಳದ ಹುಡುಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳನ್ನು ಬಾಚಿಕೊಂಡಿದ್ದಾರೆ. ಇದೀಗ ಪುರುಷರ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡಾಳುಗಳು ಸಾಧನೆ ಮಾಡಿದ್ದಾರೆ.

ಆಗಸ್ಟ್ 7 ರ ಭಾನುವಾರದಂದು ಕೇರಳದ 25 ವರ್ಷ ವಯಸ್ಸಿನ ಆಟಗಾರ ಎಲ್ದೋಸ್ ಪಾಲ್ ಅವರು ಕ್ರೀಡಾಕೂಟದಲ್ಲಿ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ಬರೆದಿದ್ದಾರೆ. ಟ್ರಿಪಲ್ ಜಂಪ್ ಫೈನಲ್‌ನಲ್ಲಿ ಭಾರತ 1-2 ರಿಂದ ಐತಿಹಾಸಿಕ ಜಯ ಸಾಧಿಸಿದೆ. ಈವೆಂಟ್‌ನಲ್ಲಿ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು ತಮ್ಮ ಭುಜದ ಮೇಲೆ ಭಾರತೀಯ ಧ್ವಜವನ್ನು ಸುತ್ತಿಕೊಂಡು ಕ್ರೀಡಾಂಗಣದ ಸುತ್ತಲೂ ಸುತ್ತುವ ಮೂಲಕ ವಿಜಯವನ್ನು ಆಚರಿಸಿದ್ದು ವಿಶೇಷವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!