ಕಾಮನ್​ವೆಲ್ತ್: ಭಾರತ-ಇಂಗ್ಲೆಂಡ್ ಸೆಮಿಫೈನಲ್, ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೌರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಮನ್​ವೆಲ್ತ್ ನಲ್ಲಿ ಮೊದಲ ಟಿ20 ಸೆಮಿಫೈನಲ್​ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಹರ್ಮನ್​ಪ್ರೀತ್ ಕೌರ್ ಬಳಗ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.

ಭಾರತ ಆಡಿರುವ ಮೂರು ಪಂದ್ಯಗಳ ಪೈಕಿ ಎರಡಲ್ಲಿ ಗೆಲುವು ದಾಖಲು ಮಾಡಿ, ಸೆಮಿಫೈನಲ್​ಗೆ ಲಗ್ಗೆ ಹಾಕಿದೆ. ಇಂದಿನ ಪಂದ್ಯದಲ್ಲಿ ಭಾರತ ಮಹಿಳಾ ಪಡೆ ಆಡುವ 11ರ ಬಳಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

ಲೀಗ್​ ಹಂತದಲ್ಲಿ ಅಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಸೋತಿರುವ ಭಾರತ ನಂತರ ಪಾಕಿಸ್ತಾನ ಹಾಗೂ ಬಾರ್ಬಡೋಸ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ. ಎರಡನೇ ಸೆಮಿಫೈನಲ್​ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ನಡುವೆ ನಡೆಯಲಿದೆ.

ಟೀಂ ಇಂಡಿಯಾ: ಸ್ಮೃತಿ ಮಂದಾನ, ಶಫಾಲಿ ವರ್ಮಾ, ರೊಡ್ರಿಗೆಸ್​, ಹರ್ಮನ್​ಪ್ರೀತ್ ಕೌರ್​(ಕ್ಯಾಪ್ಟನ್), ತಾನಿಯಾ ಭಾಟಿಯಾ(ವಿ.ಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್, ರಾಧಾ ಯಾದವ್, ಸ್ನೇಹಾ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್

ಇಂಗ್ಲೆಂಡ್ : ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲಿ, ನಟಾಲಿ ಸ್ಕಿವರ್​(ಕ್ಯಾಪ್ಟನ್) ಆಮಿ ಜೋನ್ಸ್​(ವಿ.ಕೀ), ಮಾಯಾ ಚೌಚಿಯರ್, ಆಲಿಸ್ ಕ್ಯಾಪ್ಸೆ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್​, ಫ್ರೇಯಾ ಕೆಂಪ್​, ಇನ್ಸಿ ವಾಂಗ್, ಸಾರಾ ಗ್ಲೆನ್​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!