Friday, August 12, 2022

Latest Posts

ವಾಹನ ಮಾಲೀಕರಿಗೆ ಸಿಹಿಸುದ್ದಿ ಕೊಟ್ಟ ಕಂಪನಿ: ಉಚಿತ ಸರ್ವಿಸ್, ವಾರಂಟಿ ಅವಧಿ ವಿಸ್ತರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿ ವಿಸ್ತರಿಸಿವೆ.
ಲಾಕ್‌ಡೌನ್‌ ಇರುವ ನಗರಗಳು ಮತ್ತು ರಾಜ್ಯಗಳಲ್ಲಿನ ಗ್ರಾಹಕರಿಗೆ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಣೆ ಮಾಡಿರುವುದಾಗಿ ಹುಂಡೈ ಮೋಟರ್‌ ಇಂಡಿಯಾ ಕಂಪನಿ ತಿಳಿಸಿದೆ.
ರೆನೊ ಮತ್ತು ಎಂಜಿ ಮೋಟರ್‌ ಇಂಡಿಯಾ ಕಂಪನಿಗಳು ಏಪ್ರಿಲ್‌ 1ರಿಂದ ಮೇ 31ರವರೆಗಿನ ಅವಧಿಯಲ್ಲಿ ಮುಗಿಯಲಿರುವ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿವೆ.
ರಾಜ್ಯಗಳಲ್ಲಿ ವಾಹನದ ವಾರಂಟಿ ಮತ್ತು ವಿಸ್ತರಿತ ವಾರಂಟಿ ಅವಧಿಯನ್ನು ಒಂದು ತಿಂಗಳವರೆಗೆ ಹೆಚ್ಚಿಸಿರುವುದಾಗಿ ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿ ಹೇಳಿದೆ.
ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಉಚಿತ ಸೇವೆಗಳು ಮತ್ತು ವಾರಂಟಿ ಅವಧಿಯನ್ನು ಜೂನ್‌ 30ರವರೆಗೂ ವಿಸ್ತರಿಸಿರುವುದಾಗಿ ತಿಳಿಸಿದೆ. 2021ರ ಮಾರ್ಚ್‌ 15ರಿಂದ ಮೇ 31ರ ಅವಧಿಯ ಒಳಗಡೆ ಉಚಿತ ಸೇವೆ ಮತ್ತು ವಾರಂಟಿ ಮುಗಿಯುವುದಿದ್ದರೆ, ಅಂತಹ ವಾಹನಗಳಿಗೆ ಮಾತ್ರವೇ ಇದು ಅನ್ವಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಮೋಟರ್ಸ್‌ ಸಹ ದೇಶದಾದ್ಯಂತ ಏಪ್ರಿಲ್‌ 1ರಿಂದ ಮೇ 31ರ ಒಳಗೆ ಮುಗಿಯಲಿರುವ ವಿಸ್ತರಿತ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss