ಕಂಪ್ಲಿ ಉತ್ಸವ: ಅದ್ದೂರಿಯಾಗಿ ನಡೆದ ವೈಭವದ ಮೆರವಣಿಗೆ

ಹೊಸ ದಿಗಂತ ವರದಿ , ಬಳ್ಳಾರಿ:

ಕಂಪ್ಲಿ ಕಲಾರತಿ ಉತ್ಸವ ನಿಮಿತ್ತ ಶನಿವಾರ ಸಂಜೆ ನಡೆದ ಕಂಪ್ಲಿ ವೈಭವ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರು ಸಂಜೆ ವೈಭವದ ಮೆರವಣಿಗೆಗೆ ಚಾಲನೆ ನೀಡಿದರು. ಪಟ್ಟಣದ ಶಾಮಿಯಾಚಂದ್ ಶಾಲೆಯಿಂದ ಆರಂಭವಾಗಿ ಮೆರವಣಿಗೆ, ಮಾರ್ಕೆಟ್ ಮೂಲಕ ನಡುಕಲು ಮಸೀದಿ, ಅಂಬೇಡ್ಕರ್ ವೃತ್ತ, ಸೋಮೇಶ್ವರ ದೇವಸ್ಥಾನದವರೆಗೆ ನಡೆಯಿತು.

ಈ ವೈಭವದ ಮೆರವಣಿಗೆಯಲ್ಲಿ ಕಂಪ್ಲಿ ಉದಯ ತಾಷರಂಡೋಲ್‍ನ ಬಾಲು ಹೆಚ್.ಪಿ ಅವರ ತಾಷರಂಡೋಲ್, ಕಂಪ್ಲಿ ಜೈ ಆದಿವಾಸಿ ರಂಡೋಲ್‍ನ ಹೆಚ್.ಪಿ.ಶಿಕಾರಿರಾಮು ತಂಡದಿಂದ ತಾಷರಂಡೋಲ್, ಬಳ್ಳಾರಿ ಜಿ.ಮೋಹನ್ ತಂಡದಿಂದ ತಾಷಾರಂಡೋಲ್, ಕಂಪ್ಲಿ ಕೆಜಿಎನ್ ಅವರ ತಾಷರಂಡೋಲ್, ಕಂಪ್ಲಿಯ ಬಾಲಿ ತಾಷರಂಡೋಲ್, ನ್ಯೂಮುಬಾರಕ್ ತಾಷರಂಡೋಲ್, ದೇವಲಾಪುರ ಹಾಲುಮತದ ಡೊಳ್ಳು ಕುಣಿತ ತಂಡ, ರಾಮಸಾಗರ ಹಾಲುಮತದ ಡೊಳ್ಳು ಕುಣಿತ ತಂಡ, ನಂ.10 ಮುದ್ದಾಪುರ ಹಾಲುಮತದ ಡೊಳ್ಳು ಕುಣಿತ ತಂಡ, ಸೋಮಲಾಪುರ ವಿ.ಮಾರುತಿ ಅವರ ಹಗಲುವೇಷ, ಕೊಟ್ಟೂರಿನ ಅಂಬಲಿಯ ಬಸವೇಶ್ವರ ನಂದಿಧ್ವಜ ಸಾಂಸ್ಕೃತಿಕ ಕಲಾತಂಡದಿಂದ ನಂದಿಧ್ವಜ, ಹೊಸಪೇಟೆ ಮರಗಾಲು ಕುಣಿತ ಕಲಾತಂಡದಿಂದ ಮರಗಾಲು ಕುಣಿತ, ರಾಮಸಾಗರ ಕಾಳಿಕೃಷ್ಣ, ಒನಕೆ ಓಬವ್ವ ತಂಡದಿಂದ ಕಹಳೆವಾದನ, ಸಂಡೂರಿನ ತಾರಾನಗರದ ಎಂ.ಆನಂದಸ್ವಾಮಿ ವೀರಗಾಸೆ ಕುಣಿತ ತಂಡದಿಂದ ವೀರಗಾಸೆ ಕುಣಿತ, ಬಳ್ಳಾರಿ ಹಕ್ಕಿಗೂಡು ಹಕ್ಕಿಪಿಕ್ಕಿ ಜನಪದ ಮಹಿಳಾ ನೃತ್ಯ ತಂಡದಿಂದ ಜಾನಪದ ನೃತ್ಯ, ಹೊಸಪೇಟೆ ಕುರಿ ಗಾದಿಲಿಂಗಪ್ಪ ಇಂಗಳಿಗಿ ಕುದುರೆ ಕುಣಿತ, ಹೊಸಪೇಟೆ ಎಸ್.ರಾಘವೇಂದ್ರ ಅವರ ಕೋಲಾಟ, ಕಂಪ್ಲಿ ಸಿಂಧೋಳದ ರಾಹುಲ್ ನಾಗಪ್ಪ ಅವರ ಉರುಮೆ ವಾದ್ಯ, ಬಳ್ಳಾರಿ ಮಲ್ಲಯ್ಯ, ಮಾಳ ಮಲ್ಲೇಶ್ವರ ವಗ್ಗರ ಸಂಘದಿಂದ ಗೊರವರ ಕುಣಿತ, ಸಂಡೂರು ಹಳೇದರೋಜಿಯ ವಿ.ತಿಮ್ಮಪ್ಪ ಅವರಿಂದ ಹುಲಿವೇಷ, ರಾಮಸಾಗರ ಕೆ.ವಸಂತ್‍ಕುಮಾರ್ ಅವರಿಂದ ಕಹಳೆ ವಾದನ, ವೀರಭದ್ರ ಕಲಾ ತಂಡದಿಂದ ನಂದಿಧ್ವಜ, ತಾರಾನಗರ ಹೆಚ್.ಎಂ.ಬಸವಲಿಂಗಯ್ಯ ಅವರ ವೀರಗಾಸೆ, ಸೋಗಿ ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿ ಕಲಾತಂಡದಿಂದ ಹಲಗೆ ವಾದನ, ಬಳ್ಳಾರಿ ಗುಡಾನಗರದ ವೈ.ಎಂ.ಗಾದಿಲಿಂಗಪ್ಪ ಹಗಲು ವೇಷ, ಹೊಟಪೇಟೆ ಹೆಚ್.ಪಂಪಾಪತಿ ಕೋಲಾಟ, ಹೊಸಪೇಟೆ ಜಿ.ನಾಗಲಾಪುರದ ಎಂ.ಜಿ. ಶಿವನಾಗಪ್ಪ ಕುದುರೆ ಕುಣಿತ, ಕುಡಿತಿನಿ ಷಣ್ಮುಖಸ್ವಾಮಿ ಸಮಾಳ ವಾದನ, ಹರಪನಹಳ್ಳಿ ವಿಶ್ವಕಲಾ ರೈತ ನಾಟ್ಯ ಸಾಂಸ್ಕೃತಿಕ ಭವನ ಸಂಘದಿಂದ ಗಾರುಡಿ ಗೊಂಬೆ, ಕೋಳಿಬುರುಜನಹಳ್ಳಿ ಜಿ.ರಾಜಣ್ಣ ಮ್ಯಾಸ ಬೇಡರ ಕುಣಿತ ಕಲಾತಂಡಗಳು ಮೆರವಣಿಗೆಯಲ್ಲಿ ಉತ್ಸವದ ಮೆರಗನ್ನು ನೀಡಿತು. ಈ ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳು, ಕಲಾವಿಧರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!