ಮಂಕಿಪಾಕ್ಸ್‌ ಪ್ರಕರಣಗಳ ಕುರಿತು WHO ವರದಿ, ಬೆಲ್ಜಿಯಂನಲ್ಲಿ ಕ್ವಾರಂಟೈನ್‌ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಫ್ರಿಕನ್ ದೇಶಗಳಲ್ಲಿ ಹುಟ್ಟಿಕೊಂಡ ಮಂಕಿಪಾಕ್ಸ್ ವೈರಸ್ ವಿಶ್ವದಾದ್ಯಂತ ವೇಗವಾಗಿ ಹರಡುತ್ತಿದೆ. ಇಲ್ಲಿಯವರೆಗೆ 13 ದೇಶಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 90ಕ್ಕೂ ಹೆಚ್ಚು ಪ್ರಕರಣಗಳು ಅಧಿಕೃತವಾಗಿ ದೃಢಪಟ್ಟಿವೆ.ಇನ್ನೂ ಕೆಲವು ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ. ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇಸ್ರೇಲ್. ಐರೋಪ್ಯ ರಾಷ್ಟ್ರಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ವೈರಸ್ ಕುರಿತು ತುರ್ತು ಸಭೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಶ್ವದಾದ್ಯಂತ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ. ಮಂಕಿಪಾಕ್ಸ್ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು, ಸೋಂಕಿತರಿಗೆ ಬೆಲ್ಜಿಯಂನಲ್ಲಿ  21 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಮೇ 13, 2022 ರಿಂದ ಮೇ 21, ರವರೆಗೆ WHO ದಾಖಲಿಸಿದ ಮಂಕಿಪಾಕ್ಸ್ ಪೀಡಿತ ದೇಶಗಳ ಪಟ್ಟಿ 

ಆಸ್ಟ್ರೇಲಿಯಾ: 1-5ದೃಢ ಪ್ರಕರಣಗಳು
ಬೆಲ್ಜಿಯಂ: 1-5 ಪ್ರಕರಣಗಳೊಂದಿಗೆ 1-5 ಶಂಕಿತ ಪ್ರಕರಣಗಳು
ಕೆನಡಾ: 11-12 ಶಂಕಿತ ಪ್ರಕರಣಗಳು 1-5 ದೃಢ ಪ್ರಕರಣಗಳು
ಫ್ರಾನ್ಸ್: 1-5 ಪ್ರಕರಣಗಳು, 1-5 ಶಂಕಿತ ಪ್ರಕರಣಗಳು
ಜರ್ಮನಿ: 1-5 ಪ್ರಕರಣಗಳು
ಇಟಲಿ: 1-5 ಪ್ರಕರಣಗಳು
ನೆದರ್ಲ್ಯಾಂಡ್ಸ್: 1-5 ಪ್ರಕರಣಗಳು
ಪೋರ್ಚುಗಲ್: 21-30 ಪ್ರಕರಣಗಳು
ಸ್ಪೇನ್: 6-10 ಶಂಕಿತ ಪ್ರಕರಣಗಳೊಂದಿಗೆ 21-30 ಪ್ರಕರಣಗಳು
ಸ್ವೀಡನ್: 1-5 ಪ್ರಕರಣಗಳು
ಯುನೈಟೆಡ್ ಕಿಂಗ್‌ಡಮ್: 21-30 ಪ್ರಕರಣಗಳು
ಯುನೈಟೆಡ್ ಸ್ಟೇಟ್ಸ್: 1-5 ಪ್ರಕರಣಗಳು

ರೋಗದ ವಿರುದ್ಧ ಹೋರಾಡಲು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆನಡಾ ಸರ್ಕಾರವು ಮಂಕಿಪಾಕ್ಸ್ ಸೋಂಕಿನಿಂದ ಜನರನ್ನು ರಕ್ಷಿಸಲು ಸಿಡುಬು ಲಸಿಕೆಯನ್ನು ಬಳಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!