Friday, June 2, 2023

Latest Posts

ಕಂಪ್ಯೂಟರ್ ಬಿಡಿಭಾಗ ಮಾರಾಟ ಕುಸಿತ: 300 ಉದ್ಯೋಗಿಗಳನ್ನು ವಜಾಗೊಳಿಸಿದ ಲಾಜಿಟೆಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಆರ್ಥಿಕ ಅನಿಶ್ಚಿತತೆಗಳಿಂದಾಗಿ ಜಗತ್ತಿನಾದ್ಯಂತ ಉದ್ಯೋಗ ಕಡಿತಗಳು ನಡೆಯುತ್ತಿದ್ದು ಇದೀಗ ಸ್ವಿಸ್ ತಂತ್ರಜ್ಞಾನ ಸಂಸ್ಥೆ ಲಾಜಿಟೆಕ್ 300 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಕಂಪ್ಯೂಟರ್‌ ಬಿಡಿಭಾಗಗಳ ಮಾರಾಟದಲ್ಲಿ ಕುಸಿತವುಂಟಾಗಿದ್ದು ಇದರಿಂದ ಕಂಪನಿಯ ಆರ್ಥಿಕತೆಯೂ ನಷ್ಟದಲ್ಲಿ ಸಿಲುಕಿದೆ ಹೀಗಾಗಿ ಕಂಪನಿಯು ತನ್ನ ಉದ್ಯೋಗಿಗಳಲ್ಲಿ ಮರುಹೊಂದಾಣಿಕೆ ಮಾಡುತ್ತಿದ್ದು ಇದರ ಭಾಗವಾಗಿ ಉದ್ಯೋಗ ಕಡಿತಗಳು ನಡೆದಿವೆ ಎಂದು ಕಂಪನಿ ಹೇಳಿದೆ.

ಲಾಜಿಟೆಕ್ ಮಾರ್ಚ್ 2022 ರ ಹೊತ್ತಿಗೆ 8,200 ಉದ್ಯೋಗಿಗಳನ್ನು ಹೊಂದಿತ್ತು. ಇದೀಗ 300 ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ.

ಲಾಜಿಟೆಕ್‌ನ ಆದಾಯವು ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ 22 ಶೇಕಡಾ ಕಡಿಮೆಯಾಗಿದೆ.

ಹಿಂದಿನ ವರ್ಷದ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಗೇಮಿಂಗ್ ಮಾರಾಟವು ಶೇಕಡಾ 16 ರಷ್ಟು ಮತ್ತು ವೀಡಿಯೊ ಗೇಮಿಂಗ್‌ ಸಂಬಂಧಿಸಿದ ವಸ್ತುಗಳ ಮಾರಾಟವು 21 ಶೇಕಡಾ ಕಡಿಮೆಯಾಗಿದೆ.

ಕೀಬೋರ್ಡ್‌ಗಳ ಮಾರಾಟವು ಶೇಕಡಾ 22 ರಷ್ಟು ಮತ್ತು ಪಾಯಿಂಟಿಂಗ್ ಸಾಧನಗಳ ಮಾರಾಟವು ಶೇಕಡಾ 14 ರಷ್ಟು ಕಡಿಮೆಯಾಗಿದೆ. ಹೀಗಾಗಿ ಕಂಪನಿಯು ಆರ್ಥಿಕ ನಷ್ಟವನ್ನು ಸರಿದೂಗಿಸಲು ಉದ್ಯೋಗ ಕಡಿತದ ಮೊರೆ ಹೋಗಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!