ಇನ್ಮುಂದೆ ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಸ್ಕ್ಯಾನರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದ ವಿಮಾನ ನಿಲ್ದಾಣಗಳಲ್ಲಿ ಇನ್ಮುಂದೆ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನದ ಆಧಾರದ ಮೇಲೆ ಸ್ಕ್ಯಾನರ್‌ ಸ್ಥಾಪಿಸಲಾಗುವುದು ಎಂದು ವಾಯುಯಾನ ಭದ್ರತಾ ಕಾವಲುಗಾರರಾಗಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿಯು (BCAS)ಹೇಳಿದೆ.

ಇದರಿಂದ ಪ್ರಯಾಣಿಕರು ಹ್ಯಾಡ್ ಬ್ಯಾಗ್​ನಿಂದ (ಎಲೆಕ್ಟ್ರಾನಿಕ್ ಸಾಧನ (ಶೂ, ಲೆದರ್ ಬೆಲ್ಟ್) ಅಥವಾ ಇನ್ನಿತರ ವಸ್ತುಗಳನ್ನು ಪರಿಶೀಲನೆ ಮಾಡಲು ತೆಗೆಯುವ ಅಗತ್ಯ ಬರುವುದಿಲ್ಲ.

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (ಬಿಸಿಎಎಸ್) ನ ಜಂಟಿ ಮಹಾನಿರ್ದೇಶಕ ಜೈದೀಪ್ ಪ್ರಸಾದ್ ಬುಧವಾರ ಮಾತನಾಡಿ, ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನದ ಆಧಾರದ ಮೇಲೆ ಸ್ಕ್ಯಾನರ್‌ಗಳನ್ನು ಸ್ಥಾಪಿಸಲು ಪ್ರಸ್ತಾಪವಿದ್ದು, ಇದರಿಂದ ಪ್ರಯಾಣಿಕರ ಹ್ಯಾಡ್ ಬ್ಯಾಗ್​ನಲ್ಲಿರುವ(ಮೊಬೈಲ್, ಬ್ಲೂಟೂತ್, ಲೆದರ್ ಬೆಲ್ಟ್) ವಸ್ತುಗಳನ್ನು ಮೂರು ಆಯಾಮದಲ್ಲಿ ಪರಿಶೀಲನೆ ಮಾಡುತ್ತದೆ ನೀಡುತ್ತದೆ. ಇದನ್ನು BCAS ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಜಾರಿಗೆ ತರಲಾಗುವುದು. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಶೀಲನೆ ಅವ್ಯವಸ್ಥೆಯಿಂದ ವಿಮಾನ ನಿಲ್ದಾಣ ಜನದಟ್ಟಣೆಯಿಂದ ಅನೇಕ ಸಮಸ್ಯೆಗಳು ಹೆಚ್ಚಾಗಿತ್ತು. ಇದನ್ನು ಪರಿಹಾರ ಮಾಡಲು ಈ ಕ್ರಮವನ್ನು ತರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!