ಡಿಸೆಂಬರ್ 31ರೊಳಗೆ ಬಿಬಿಎಂಪಿ ಚುನಾವಣೆ ನಡೆಸಿ, ಮೀಸಲುಪಟ್ಟಿ ಪರಿಷ್ಕರಿಸಿ ಕೊಡಿ- ಕರ್ನಾಟಕ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಬಿಎಂಪಿ ಚುನಾವಣೆ ಯಾವಾಗ ಎನ್ನುವ ಪ್ರಶ್ನೆಗೆ ಕಡೆಗೂ ಉತ್ತರ ದೊರಕಿದ್ದು, ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಿ, ಮೀಸಲುಪಟ್ಟಿ ಪರಿಷ್ಕರಿಸಿ ನೀಡಿ ಎಂದು ಕರ್ನಾಟಕ ಹೈ ಕೋರ್ಟ್ ಆದೇಶ ನೀಡಿದೆ.

ಬಿಬಿಎಂಪಿಯಲ್ಲಿ ಸದಸ್ಯರುಗಳಿಲ್ಲದೇ ಎರಡು ವರ್ಷಗಳು ಕಳೆದಿವೆ. ವಾರ್ಡ್ ಪುನರ್ ವಿಂಗಡಣೆ, ವಿಸ್ತರಣೆ, ಮೀಸಲಾತಿ ಹೀಗೆ ನಾನಾ ಕಾರಣಗಳಿಂದ ಚುನಾವಣೆ ನಡೆದಿರಲಿಲ್ಲ. ಮೀಸಲಾತಿ ಪಟ್ಟಿ ಪ್ರಶ್ನಿಸಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ನೀಡಿದೆ.

ಮೀಸಲಾತಿ ಪಟ್ಟಿ ಪ್ರಶ್ನಸಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿದ್ದು, ಪಟ್ಟಿ ತಯಾರಿಗೆ 16 ವಾರ ಕಾಲಾವಕಾಶ ಬೇಕೆಂದು ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು. ಇಷ್ಟು ಸಮಯ ಕೇಳಿದರೆ ತಕ್ಷಣವೇ ಚುನಾವಣೆಗೆ ಆದೇಶಿಸಬೇಕಾದೀತು. ನ.30ರೊಳಗೆ ಮೀಸಲಾತಿ ಪಟ್ಟಿ ನೀಡಿ ಎಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆ 2022ರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಪಾಲಿಕೆಯಲ್ಲಿ243 ವಾರ್ಡ್‌ಗಳಲ್ಲಿ ಒಟ್ಟು 79 ಲಕ್ಷದ 19 ಸಾವಿರದ 463 ಮತದಾರರು ಇರುವುದಾಗಿ ಘೋಷಿಸಲಾಗಿದೆ. ಸರ್ಕಾರ ಒಬಿಸಿ, ಮಹಿಳಾ ಮೀಸಲಾತಿಯಲ್ಲಿ ಗೊಂದಲ ಮಾಡಿದ್ದು, ಇದನ್ನು ಸರಿಪಡಿಸಲು ನ.30ರವರೆಗೆ ಅವಕಾಶವಿದೆ.

ಭಕ್ತವತ್ಸಲ ಸಮಿತಿ ಪ್ರಕಾರ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಕೆಲವು ತಾರತಮ್ಯ ಆಗಿತ್ತು, ಗೊಂದಲಗಳೂ ಇತ್ತು. ಇದನ್ನು ಸರಿಪಡಿಸಲು ಸರ್ಕಾರ ನಾಲ್ಕು ತಿಂಗಳು ಕಾಲಾವಕಾಶ ನೀಡಿತ್ತು. ಆದರೆ ಹೈಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಬದಲಾಗಿ ಎರಡು ತಿಂಗಳು ಕಾಲಾವಕಾಶ ನೀಡಿದೆ. ನ್ಯಾಯಾಧೀಶರ ಸೂಚನೆಯಂತೆ ಡಿಸೆಂಬರ್ 31 ರೊಳಗೆ ಚುನಾವಣೆ ನಡೆಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!