ಕಾಂಗ್ರೆಸ್ ಆಪ್ತ ಅಶೋಕ್ ಗೆಹ್ಲೋಟ್ ಹೊಗಳಿದ ಪ್ರಧಾನಿ ಮೋದಿ: ರಾಜಕೀಯದ ಸಂಚಲನಕ್ಕೆ ಹೊಸ ವೇದಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಆಪ್ತ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ನಾನಾ ವಿಚಾರದಲ್ಲಿ ಚರ್ಚೆಯಲ್ಲಿದ್ದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಗಾಂಧಿ ಕುಟುಂಬ ಕೆಲ ಪ್ರಯತ್ನ ನಡೆಸಿತ್ತು. ಆದರೆ ಇತ್ತ ರಾಜಸ್ಥಾನ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು. ಹೀಗಾಗಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.

ಇದೀಗ ಅಶೋಕ್ ಗೆಹ್ಲೋಟ್‌ರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ರಾಜಸ್ಥಾನದ ಮಂಗರ್ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿನ ಅತ್ಯಂತ ಹಿರಿಯ ಹಾಗೂ ಅನುಭವಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಂದಿದ್ದಾರೆ.

ನಾನು ಸಿಎಂ ಆಗಿದ್ದ ದಿನದಲ್ಲಿ ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಸಿಎಂ ಆಗಿದ್ದರು. ನಾವು ಹಲವು ಯೋಜನೆಗಳನ್ನು ಜಂಟಿಯಾಗಿ ಮಾಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಮಾಡಿದ್ದೇವೆ. ಸದ್ಯ ಗೆಹ್ಲೋಟ್ ಅತ್ಯಂತ ಹಿರಿಯ ರಾಜಕಾರಣಿ ಮಾತ್ರವಲ್ಲ, ದೇಶದ ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಹಿರಿಯ ಹಾಗೂ ಅನುಭವಿ ಸಿಎಂ ಆಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಅನುಭವ ಯುವ ರಾಜಕೀಯ ಮುಖಂಡರಿಗೆ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇದೀಗ ರಾಜಕೀಯ ಸಂಚಲನಕ್ಕೂ ಮೋದಿ ಮಾತು ಕಾರಣವಾಗಿದೆ.

ಈಗಾಗಲೇ ರಾಜಸ್ಥಾನದ ರಾಜಕೀಯದಲ್ಲಿ ಗೆಹ್ಲೋಟ್ ಬಣದ ವಿರುದ್ಧ ಸಚಿನ್ ಪೈಲೆಟ್ ಬಣ ಕತ್ತಿ ಮಸೆಯುತ್ತಲೇ ಇದೆ. ಇದರ ನಡುವೆ ಮೋದಿ ಮಾತುಗಳು ಕೆ ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಗುದ್ದಾಟಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!