Thursday, June 30, 2022

Latest Posts

ಕಾಂಗ್ರೆಸ್ ಗೆ ದೇಶದಲ್ಲೇ ಅಸ್ತಿತ್ವವಿಲ್ಲ: ಸಚಿವ ಆನಂದ್ ಸಿಂಗ್

ಹೊಸದಿಗಂತ ವರದಿ, ಬಳ್ಳಾರಿ:

ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು, ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದಂತೆ ಅಧಿಕಾರಕ್ಕಾಗಿ ಡಿಕೆಶಿ ಹಾಗೂ ಸಿದ್ಧರಾಮಯ್ಯ ಅವರಿಬ್ಬರ ಮಧ್ಯೆ ಈಗಿನಿಂದಲೇ ಜಟಾಪಟಿ ನಡೆದಿದೆ ಎಂದು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ವಿಜಯನಗರ ಜಿಲ್ಲೆಯ ಹಂಪಸಾಗರದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಇನ್ನೂ ಚುನಾವಣೆಯೇ ನಡೆದಿಲ್ಲ, ಈಗಲೇ ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಜಟಾಪಟಿ ನಡೆದಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ನವರಿಗೆ ಅಧಿಕಾರವೇ ಮುಖ್ಯ ಹೊರತು, ಜನರ ಯೋಗಕ್ಷೇಮ, ದೇಶದ ಅಭಿವೃದ್ಧಿ ಅವರಿಗೆ ಬೇಕಿಲ್ಲ, ಇಂತವರಿಂದ ಅಭಿವೃದ್ಧಿ ಸಾಧ್ಯನಾ ಎಂದು ಪ್ರಶ್ನಿಸಿದರು. ಪಂಚಾಯತ್ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಪ್ರತಿಯೋಬ್ಬರೂ ಅಭ್ಯರ್ಥಿ ಎಂ.ವೈ.ಸತೀಶ್ ಅವರಿಗೆ ಮತ ನೀಡಿ ಬೆಂಬಲಿಸಿ ಆರ್ಶಿವಾದಿಸಿ, ರಾಜ್ಯದ ಅಭಿವೃದ್ಧಿಗಾಗಿ ಯಾವುದೇ ತೀರ್ಮಾನ ತೆಗೆದುಕೊಂಡರೂ ಮೇಲ್ಮನೆಯಲ್ಲಿ ಸಂಖ್ಯಾಬಲ ಹೆಚ್ಚಿರಬೇಕು, ಕಾಂಗ್ರೆಸ್ ನವರ ಸುಳ್ಳು ಭರವಸೆ, ನಾನಾ ಆಮೀಶಗಳಿಗೆ ಒಳಗಾಗದೇ ಪ್ರತಿಯೊಬ್ಬರೂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು‌ ಮಾತನಾಡಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನವರು ನಿಶ್ಚೀಮರು, ಅವರ ಸಂಸ್ಕೃತಿಯೇ ಅಂತಹದ್ದು, ಮತದಾರರು ಅವರ ಭರವಸೆಗಳಿಗೆ, ಅವರ ಆಮೀಶಗಳಿಗೆ ಒಳಗಾಗದೇ ಪ್ರತಿಯೋಬ್ಬರೂ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ನಮ್ಮ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರು ಸರಳ ಸಜ್ಜನಿಕೆ ರಾಜಕಾರಣಿ, ಇಲ್ಲಿವರೆಗೂ ಅವರ ವಿರುದ್ದ ಯಾವುದೇ ಸಣ್ಣ ಆರೋಪಗಳಿಲ್ಲ, ಇಲ್ಲಿವರೆಗೂ ಅವರ ಕುಟುಂಬ ಜನಸೇವೆ ಮಾಡಿಕೊಂಡು ಬಂದಿದೆ, ಯಾವುದೇ ಅಧಿಕಾರಕ್ಕಾಗಿ ಅಂಟಿಕೊಂಡವರಲ್ಲ, ಜನ ಸೇವೆ ಮಾಡಲು ಮುಂದಾದ ನಮ್ಮ ಅಭ್ಯರ್ಥಿಗೆ ಚುನಾವಣೆಯಲ್ಲಿ ಪ್ರತಿಯೋಬ್ಬರೂ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೂ ನಂದಿಹಳ್ಳಿ ಗ್ರಾಮದ ಶ್ರೀಮಠಕ್ಕೆ ಹಾಗೂ ಹಂಪಸಾಗರ ಶ್ರೀ ‌ಮಹಾದೇವತಾತನವರ ಶ್ರೀಮಠಕ್ಕೆ ಸಚಿವರು ಹಾಗೂ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರು ತೆರಳಿ, ಆರ್ಶಿವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಚಂದ್ರಾ ನಾಯ್ಕ್, ನೇಮಿರಾಜ್ ನಾಯ್ಕ್, ಬಿಜೆಪಿ ‌ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಬುಡಾ ಮಾಜಿ ಅಧ್ಯಕ್ಷ ಕೆ.ರಾಮಲಿಂಗಪ್ಪ, ಮಂಡಲ ಅಧ್ಯಕ್ಷರು, ಪಕ್ಷದ ಗಣ್ಯರು, ಕಾರ್ಯಕರ್ತರು, ಚುನಾಯಿತ ಜನಪ್ರತಿನಿಧಿಗಳು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss