ಕಾಂಗ್ರೆಸ್ ಮುಳುಗುತ್ತಿರುವ ಹಡಗು; ಜೆಡಿಎಸ್ ಇತಿಹಾಸ ಸೇರುವ ಪಕ್ಷ: ರವಿಕುಮಾರ್

ಹೊಸ ದಿಗಂತ ವರದಿ, ಮಂಡ್ಯ :

ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದರೆ, ಜೆಡಿಎಸ್ ಇತಿಹಾಸ ಸೇರುವ ಪಕ್ಷವಾಗಿದೆ. ಬಿಜೆಪಿ ಭವಿಷ್ಯವಿರುವ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಿವಿಧ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 59 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ಗೆ ಸಮರ್ಥ ಆಡಳಿತವನ್ನು ನೀಡಲಾಗಲಿಲ್ಲ. ಮೋದಿ ಅವರಂತೆ ಬಲಿಷ್ಠ ನಾಯಕತ್ವ, ಪಾರದರ್ಶಕ ಆಡಳಿತ ನೀಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ. ಹಾಗಾಗಿ ಆ ಪಕ್ಷಕ್ಕೆ ಮತ ಹಾಕದಿರುವಂತೆ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಸಿತ್ತು. ಈ ಚುನಾವಣೆಯಲ್ಲಿ ಅದು ಬಿಜೆಪಿಗೆ ಸ್ಥಿತ್ಯಂತರವಾಗಲಿದೆ. ಜಿಲ್ಲೆಯಲ್ಲಿ ಬಿಜೆಪಿ ಹೊಸ ಇತಿಹಾಸವನ್ನು ಬರೆಯಲಿದೆ ಎಂದು ಭವಿಷ್ಯ ನುಡಿದರು.
ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಬಿಜೆಪಿಗೆ ಅಸ್ತಿತ್ವವೇ ಇಲ್ಲದ ಕ್ಷೇತ್ರದಲ್ಲಿ ನಾನು ಗೆದ್ದು ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದೆ. ನಾನು ಉಪಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಮೇಲೆ ಚಪ್ಪಲಿ ಎಸೆದರು, ನನ್ನ ಮನೆಗೆ ಕಲ್ಲು ಹೊಡೆದು ಬೆಂಕಿ ಹಚ್ಚಲು ಪ್ರಯತ್ನಿಸಿದರು. ಆದರೂ ನಾನು ಹೆದರದೆ ಗೆದ್ದು ತೋರಿಸಿದೆ. ಜಿಲ್ಲೆಯಲ್ಲಿ ಜೆಡಿಎಸ್‌ನ್ನು 7 ಕ್ಷೇತ್ರಗಳಲ್ಲಿ ಗೆಲ್ಲಿಸಿದಿರಿ. ನಾಲ್ಕು ವರ್ಷಗಳಲ್ಲಿ ಅವರ ಕೊಡುಗೆ ಏನು. ಮೋಸ ಮಾಡುವುದೇ ಅವರ ಕೆಲಸ. ನಾವು ಬಡವರು, ರೈತರ ಪರ ಎನ್ನುತ್ತಲೇ ಅಕಾರ ಬಂದಾಗ ಬಡವರ ಬಳಿಯೂ ಬರುವುದಿಲ್ಲ, ರೈತರ ಕೈಗೂ ಸಿಗುವುದಿಲ್ಲ. ಜೆಡಿಎಸ್‌ನವರ ಎಲ್ಲಾ ಆಟಗಳನ್ನು ನೋಡಿ ಅಶೋಕ್ ಜಯರಾಂ, ಲಕ್ಷ್ಮೀ ಅಶ್ವಿನ್‌ಗೌಡ ಬಿಜೆಪಿ ಸೇರಿದರು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!