Friday, September 30, 2022

Latest Posts

ಕಾಂಗ್ರೆಸ್ ಯಾವುದೇ ʼಧರ್ಮವನ್ನುʼ ಒಡೆದಿಲ್ಲ, ಒಗ್ಗೂಡಿಸಿದ್ದೇವೆ: ಎಂ.ಬಿ. ಪಾಟೀಲ

ಹೊಸಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ಯಾವುದೇ ಧರ್ಮ ಒಡೆದಿಲ್ಲ. ಶೈಕ್ಷಣಿಕ ವಿಚಾರವಾಗಿ ಪ್ರಯತ್ನ ಮಾಡಿದ್ದೇವೆ ಎಂದು ಕೆಪಿಸಿಸಿ ಮಾಧ್ಯಮ ಪ್ರಚಾರಕ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರ ಸೈದ್ಧಾಂತಿಕ ವಿಚಾರಗಳು ಸರಿಯಿಲ್ಲ. ಈಗ ರಾಜ್ಯದಲ್ಲಿ ಲಿಂಗಾಯತ ಉಪ ಪಂಗಡಗಳು ಬೇರೆ ಬೇರೆಯಾಗುತ್ತಿವೆ. ಹೀಗಾಗಿ ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರಂಭಾಪುರಿ ಶ್ರೀಗಳ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ, ಶ್ರೀಗಳ ಹಾಗೂ ಸಿದ್ದರಾಮಯ್ಯ ಅವರ ನಡುವೆ ಏನು ಚರ್ಚೆಯಾಗಿದೆ ತಿಳಿದಿಲ್ಲ, ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟವಾಗಿ ಹೇಳಬೇಕು.
ರಾಜ್ಯದಲ್ಲಿ ಲಿಂಗಾಯತ ಸಮಾಜದ 99 ಉಪಪಂಗಡಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಶೈಕ್ಷಣಿಕ ಸೌಲಭ್ಯ ಸಿಗಬೇಕು ಅನ್ನೋ ಉದ್ದೆಶದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಯತ್ನ ಮಾಡಲಾಗಿತ್ತು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!