ಕಾರ್ಮಿಕರಿಗೆ ಇಎಸ್ಐ, ವಿಮೆ ಸೌಲಭ್ಯ ಕಲ್ಪಿಸಿದ್ದು ಕಾಂಗ್ರೆಸ್ : ಮಾಜಿ ಸಚಿವ ಎಂ.ದಿವಾಕರ್ ಬಾಬು

ಹೊಸದಿಗಂತ ವರದಿ ಬಳ್ಳಾರಿ :

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕಾರ್ಮಿಕರನ್ನು ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಪ್ರತಿಯೋಬ್ಬ ಕಾರ್ಮಿಕರಿಗೆ ವಿಮೆ ಹಾಗೂ ಇಎಸ್ಐ ಸೌಲಭ್ಯ ಕಲ್ಪಿಸಿದ್ದು, ಕಾಂಗ್ರೆಸ್ ಎನ್ನುವುದು ಯಾರೂ ಮರೆಯಕೂಡದು ಎಂದು ಮಾಜಿ ಸಚಿವ ಎಂ.ದಿವಾಕರ್ ಬಾಬು ಅವರು ಹೇಳಿದರು.

ನಗರದ ಕೈಗಾರಿಕಾ ಪ್ರದೇಶದ ಮುಂಡ್ರಗಿ 2ನೇ ಹಂತದ ಅಗ್ರೋಟೆಕ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾವು ನಿಮಗಾಗಿ, ನೀವು ನಮಗಾಗಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಹಮಾಲರಿಗೆ 600ಕ್ಕೂ ಹೆಚ್ಚು ನಿವೇಶನಗಳನ್ನು ನೀಡಿದ್ದು, 18 ವರ್ಷ ಕಳೆದರೂ ಇಲ್ಲಿವರೆಗೂ ಒಂದು ನಿವೇಶನ ಕೊಟ್ಟಿಲ್ಲ, ಗಣಿನಾಡು ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ಜನರ ಆರ್ಶಿವಾದದಿಂದ ಈ ಬಾರಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಖಂಡಿತ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ. ಕಳೆದ ಬಾರಿ ನಿವೇಶನಗಳನ್ನು ಹಂಚಲು ಸರ್ಕಾರದ ವಶಕ್ಕೆ ನೀಡಿ ತಪ್ಪು ಮಾಡಿದೆ. ಈ ಬಾರಿ ಆ ತಪ್ಪು ಮಾಡೋಲ್ಲ, ರೈಸ್ ಮಿಲ್, ಕಾಟನ್ ಮಿಲ್, ಎಸಿ ಗೊಡಾನ್ ನಲ್ಲಿ ಕೆಲಸ ನಿರ್ವಹಿಸುವ ಎಲ್ಲ ಕಾರ್ಮಿಕರಿಗೆ ಈ ಬಾರಿ ನಾನೇ ಲೇಔಟ್ ನಿರ್ಮಿಸಿ 25*30‌ ನಿವೇಶನಗಳನ್ನು ವಿತರಿಸುವೆ, ಇದು ಭರವಸೆಯಲ್ಲ ನುಡಿದಂತೆ ನಡೆಯುವೆ, ಪ್ರತಿಯೋಬ್ಬರೂ ನಮ್ಮ ಮೇಲೆ ವಿಶ್ವಾಸಬಿಟ್ಟು ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳ ಕಾರ್ಯವೈಖರಿಯನ್ನು ಜನತೆ ಗಮನಿಸಿದ್ದು, ಈ ಬಾರಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಬೇಕು ಎಂದು ತೀರ್ಮಾನಿಸಿದ್ದಾರೆ. 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೋಮ್ಮೆ ಅಧಿಕಾರದ ಗದ್ದುಗೆ ಏರಲಿದೆ, ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ನಮ್ಮ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಹನುಮ ಕಿಶೋರ್ ಅವರು ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮತದಾರರ ಆರ್ಶಿವಾದದಿಂದ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿಯನ್ನು ಜನತೆ ಗಮನಿಸಿದ್ದು, ಜನರು ಬದಲಾವಣೆ ಬಯಸಿದ್ದಾರೆ. ಪ್ರಜಾಧ್ವನಿ ಯಾತ್ರೆ, ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ಜನಬೆಂಬಲವೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ದಿವಾಕರ್ ಬಾಬು ಅವರು ಹಮಾಲರು ಕಾರ್ಮಿಕರೊಂದಿಗೆ ಚೆರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಕಾರ್ಮಿಕರ ನಾನಾ ಬೇಡಿಕೆಗಳಿಗೆ ಸ್ಪಂಧಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಿಮ್ಮಪ್ಪ ಹಂದ್ರಾಳ್, ಕಾರ್ಕಲತೋಟ ವೀರೇಶ್, ಕೃಷ್ಣಪ್ಪ, ಶೇಖರ್, ಸೂರಿ, ರಾಮಾಂಜಿನೇಯ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!