ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಕಾಂಗ್ರೆಸ್ ಎಲ್ಲ ಸಮಯದಲ್ಲೂ ಎಲ್ಲದಕ್ಕೂ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಯಾವಾಗಲೂ ಎಲ್ಲದಕ್ಕೂ ತಯಾರಾಗಿರುತ್ತದೆ. ಚುನಾವಣೆ ಎದುರಿಸೋದಕ್ಕೂ ನಾವು ಸಿದ್ಧ’ ಎಂದಿದ್ದಾರೆ.
ಸಿಎಂ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ‘ಅವರು ಬಿದ್ರು, ಇವರು ಬಿದ್ರು, ಮರ ಬಿತ್ತು, ಕೊಂಬೆ ಬಿತ್ತು ಅಂತ ಕಾಂಗ್ರೆಸ್ ಕಾಯ್ತಾ ಕೂರೋದಿಲ್ಲ. ಎಲ್ಲ ಸನ್ನಿವೇಶಕ್ಕೂ ಸದಾ ತಯಾರಾಗಿರುತ್ತದೆ’ ಎಂದಿದ್ದಾರೆ.