Sunday, July 3, 2022

Latest Posts

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ತಿರುಕನ ಕನಸಿನಂತೆ : ಸಚಿವ ಆರ್.ಅಶೋಕ್

ದಿಗಂತ ವರದಿ ಹುಬ್ಬಳ್ಳಿ:

ರಾಜ್ಯದಲ್ಲಿ ಕಾಂಗ್ರೆಸ್ ಈಗಾಗಲೇ ದೂಳಿಪಟವಾಗಿದ್ದು,ಮತ್ತೆ ಅವರು ಅಧಿಕಾರಕ್ಕೆ ಬರುವುದು ತಿರುಕನ ಕನಸಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗವಾಡಿದರು.
ನಗರದಲ್ಲಿ ಬುಧವಾರ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಗೆ ಭಾಗಿಯಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತಾಂತರ ನಿಷೇಧ ಕಾಯ್ದೆಯನ್ನು ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವಾರದಲ್ಲಿಯೇ ತೆಗೆದು ಹಾಕಲಾಗುವುದು ಎಂದು ಹೇಳಿದ್ದು ವಿಪರ್ಯಾಸವಾಗಿದೆ.

ಇತ್ತೀಚೆಗೆ ಕಾಂಗ್ರೆಸ್ ತನ್ನ 137 ವರ್ಷದ ಸಂಸ್ಥಾಪಕ ದಿನ ಮಾಡುವ ಸಂದರ್ಭದಲ್ಲಿ ಬಾವುಟ ಬಿದ್ದು ಹೋಗಿದೆ. ಅದು ಮತ್ತೆ ಹಾರಲಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾರದೇ ಇರುವ ಬಾವುಟವಾಗಿದೆ. ಬೀಳುವ ಬಾವುಟದ ಕೆಳಗೆ ಕೆಲಸ ಮಾಡುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಗಲು ಕನಸು ಕಾಣುವುದನ್ನು ಬಿಡಬೇಕು ಎಂದರು.
ಮತಾಂತರ ಆಗುವುದು ಅವರ ಲೆಕ್ಕದಲ್ಲಿ ಒಳ್ಳೆಯದು ಎಂಬ ಭಾವನೆ ಕಾಂಗ್ರೆಸ್ ನವರದ್ದಾಗಿದೆ. ದಲಿತರು ಮತ್ತು ಹಿಂದೂಗಳು ಮತಾಂತರ ಆಗಬೇಕೆಂಬುದು ಕಾಂಗ್ರೆಸ್ ನೀತಿಯಿಂದ ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ನೂರಕ್ಕೆ ನೂರು ಕಾಂಗ್ರೆಸ್ ಪಕ್ಷವನ್ನು ದೂರ ಇಡುತ್ತಾರೆ ಎಂದು ತಿಳಿಸಿದರು.

ದೇಶದಲ್ಲಿ ಧರ್ಮ ಒಡೆಯುವುದು ಜನಸಾಮಾನ್ಯರಿಗೆ ಇಷ್ಟವಿಲ್ಲ. ಸಿದ್ದರಾಮಯ್ಯ ಈಗಾಗಲೇ ಒಂದು ಬಾರಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಕಾಂಗ್ರೆಸ್ ನುಚುನೂರಾಯಿತು. 130 ಸ್ಥಾನ ಇದ್ದಿದ್ದ ಕಾಂಗ್ರೆಸ್ ಈಗ 70 ಸ್ಥಾನಕ್ಕೆ ಕುಸಿದಿದೆ. ಅದರಿಂದ ಹುಚ್ಚು ಕಲ್ಪನೆ ಇಟ್ಟಕೊಂಡಿರುವ ಹಿಂದೂ ವಿರೋಧಿ ಕಾಂಗ್ರೆಸ್ ನ್ನು ಜನರು ತಿರಸ್ಕಾರ ಮಾಡಲಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss