Saturday, April 1, 2023

Latest Posts

ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ: ಮಾಜಿ ಸಚಿವ ಪಟ್ಟಣಶೆಟ್ಟಿ

ದಿಗಂತ ವರದಿ ವಿಜಯಪುರ:

ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್ ಸಿಕ್ಕ ಮಾತ್ರಕ್ಕೆ ಜನರ ಬೇಡಿಕೆ ಈಡೇರಲ್ಲ ಎಂದರು.

ಇನ್ನು ಅನ್ಯ ಕ್ಷೇತ್ರಕ್ಕೆ ಉಸ್ತುವಾರಿ ನೀಡಿದ್ದರಿಂದ ನಗರ ಕ್ಷೇತ್ರದಿಂದ ಟಿಕೆಟ್ ಸಿಗಲ್ಲ ಎಂಬುದು ಬರೀ ಸುಳ್ಳು. ನಗರ ಕ್ಷೇತ್ರದಿಂದ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಎರಡು ಬಾರಿ ನಗರ ಮತಕ್ಷೇತ್ರದಿಂದ ಗೆದ್ದಿದ್ದೇನೆ. ಈ ಬಾರಿಯೂ ಸ್ಪರ್ಧೆಗೆ ಇಚ್ಛಿಸಿದ್ದು, ಪಕ್ಷ ಅವಕಾಶ ನೀಡುವ ವಿಶ್ವಾಸವಿದೆ ಎಂದರು.

ಸಚಿವ ಮುರುಗೇಶ ನಿರಾಣಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಯಡಿಯೂರಪ್ಪ ಅವರ ಪುತ್ರ ನನಗೆ ಸ್ಪರ್ಧೆಗಿಳಿಸಿ ಗೆಲ್ಲಿಸುವ ವಿಚಾರದಲ್ಲಿ ಇದ್ದಾರೆ. ಪಕ್ಷಕ್ಕೆ ಸದಾ ಅವರ ಬೆಂಬಲ ಇದ್ದೇ ಇರಲಿದೆ. ಅವರೆಲ್ಲ ನನಗೆ ಆತ್ಮೀಯರು. ವೈಯಕ್ತಿಕ ಸಂಬಂಧಗಳಿದ್ದು, ಹೀಗಾಗಿ ನಾನು ನಗರ ಮತಕ್ಷೇತ್ರದ ಅಭ್ಯರ್ಥಿಯಾದರೆ ನನ್ನನ್ನು ಗೆಲ್ಲಿಸಲು ಹೆಚ್ಚಿನ ಪ್ರಯತ್ನ ಮಾಡುವ ವಿಶ್ವಾಸ ಇದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!