ರಾಜ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ ಕಾಂಗ್ರೆಸ್: ಸಚಿವ ಆರ್. ಅಶೋಕ್

ಹೊಸದಿಗಂತ ವರದಿ, ಮಂಗಳೂರು:

ಊರಿಗೆ ಮನುಷ್ಯ ಅಲ್ಲ. ಮಸಣಕ್ಕೆ ಹೆಣ ಅಲ್ಲ ಎನ್ನುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಜನತೆಯಿಂದ ಸಂಪೂರ್ಣವಾಗಿ ದೂರವಾಗುವ ದಿನ ದೂರವಿಲ್ಲ ಎಂದು ಕಂದಾಯ ಸಚಿವ ಆರ್.ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸುವ ಬದಲು ಧರಣಿ ನಡೆಸುತ್ತಿದ್ದಾರೆ. ಡಿಕೆಶಿ ಹಿಜಾಬ್ ಪರ ಇಲ್ಲ. ಸಿದ್ದರಾಮಯ್ಯ ಕೇಸರಿ ಪರ ಇಲ್ಲ. ಅವರಿಬ್ಬರ ತಿಕ್ಕಾಟದಲ್ಲಿ ಧರಣಿ ನಡೆಯುತ್ತಿದೆ.
ಈಶ್ವರಪ್ಪ ಹೇಳಿಕೆ ಅವರಿಗೆ ಕೇವಲ ನೆಪ. ಕಾಂಗ್ರೆಸ್ ಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಹಿಜಾಬ್ ವಿರುದ್ದ ಮಾತಾಡಿದರೆ ವೋಟ್ ಹೋಗುತ್ತದೆ ಎನ್ನುವ ಭಯ.ಅಧಿವೇಶನ ಕ್ಕೆ ಕೋಟ್ಯಾಂತರ ರೂ. ಖರ್ಚು ಇದೆ. ಅದು ಜನತೆಯ ತೆರಿಗೆ ಹಣ. ಕಾಂಗ್ರೆಸ್ ನವರು ಇಲ್ಲಿ ನಿದ್ದೆ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಿಜಾಬ್ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟ ಪಡಿಸಲಿ ಅಶೋಕ್ ಒತ್ತಾಯಿಸಿದರು.
ಕರಾವಳಿ ಜಿಲ್ಲೆಯಲ್ಲಿ ಕುಮ್ಕಿ, ಕಾನ, ಬಾಣೆ ಜಮೀನು ಸಮಸ್ಯೆ ಇತ್ಯರ್ಥ ಕ್ಕೆ ಸರಕಾರ ಬದ್ದವಾಗಿದೆ. ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕುಮ್ಕಿ ಜಮೀನು ಸಂಘ, ಸಂಸ್ಥೆಗಳಿಗೆ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ. ಈ ಜಮೀನು ರೈತರಿಗೆ ನೀಡಿ ನ್ಯಾಯ ಒದಗಿಸಲಾಗುವುದು.
ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಒತ್ತುವರಿ ಜಮೀನಿನಲ್ಲಿ ಇರುವ ತೋಟಗಳನ್ನು 30 ವರ್ಷ ಅವಧಿಗೆ ಕೃಷಿಕರಿಗೆ ಲೀಸ್ ನಲ್ಲಿ ನೀಡುವ ಚಿಂತನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!