Wednesday, June 29, 2022

Latest Posts

20 ವಷ೯ದಿಂದ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ಕಾಂಗ್ರೆಸ್: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ಕಳೆದ 20 ವಷ೯ದಿಂದ ಕಾಂಗ್ರೆಸ್ ಪಕ್ಷ ತನ್ಯ ಅಧ್ಯಕ್ಷರ ಹುಡುಕಾಟದಲ್ಲಿ ನಿರತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಿಗೆ ತಮ್ಮ ತಂಡವನ್ನು ಇನ್ನೂ ಕಟ್ಟಿಕೊಳ್ಳಲು ಆಗುತ್ತಿಲ್ಲ. ಪಕ್ಷದ ತಂಡ ಕಟ್ಟಿಕೊಳ್ಳಲು ಆಗದೇ ಇರುವವರು, ಹಗಲುಗನಸು ಕಾಣುತ್ತಿದ್ದಾರೆ ಎಂದರು.
ಪ್ರತಿ ಬಾರಿ ಸಿದ್ದರಾಮಯ್ಯ ಅವರು ರೆಸ್ಟ್ ಮಾಡಲು ಹೋದಾಗ ಕಾಂಗ್ರೆಸ್ ಗೆಲ್ಲಬಾರದು ಎಂಬ ಒಂದು ಸಂದೇಶ ಕೊಡುತ್ತಾರೆ. ಈಗಲೂ ಸಹ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಇದ್ದಾರೆ ಎಂದರು.
ಕೆಲವೊಮ್ಮೆ ಸಿದ್ದರಾಮಯ್ಯನವರು ನೇರವಾಗಿ ಸಂದೇಶ ಕೊಟ್ಟರೇ, ಇನ್ನೂ ಕೆಲವೊಮ್ಮೆ ಹಿಂಬಾಲಕರ ಮೂಲಕ ಸಂದೇಶ ನೀಡುತ್ತಾರೆ ಎಂದರು. ಈ ಬಾರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಗೆಲ್ಲಬಾರದು ಎಂದು ಸಂದೇಶ ನೀಡಿದ್ದಾರೆ ಎಂದರು.
ಈ ಹಿಂದೆಯೂ ಕಳೆದ ಬಾರಿ ರೆಸ್ಟ್ ಮಾಡಲು ಹೋದಾಗೊಂದು ಸಂದೇಶ ನೀಡಿದರು. ಈ ಬಾರಿಯೂ ಡಿಕೆಶಿ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದಾರೆ ಎಂದರು.
ಪರಮೇಶ್ವರ್ ಸೋಲಬೇಕೆಂದು ಪ್ಲ್ಯಾನ್ ಮಾಡಿ, ಅವರನ್ನು ಸಹ ಸೋಲಿಸಿದರು.ಈಗ ಡಿಕೆಶಿ ಸ್ಕೆಚ್ ಹಾಕಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss