spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿಲ್ಲ, ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್​ ರಕ್ಷಣೆ ಆಗ್ತಿದೆ: ಸಿಎಂ ಬೊಮ್ಮಾಯಿ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಾವೇರಿಯ ಚಿಕೌಂಶಿ ಹೊಸೂರು ಗ್ರಾಮದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇನೆ ಎಂದು ಹೇಳಿಕೊಳ್ತಿದೆ. ಆದರೆ ನಿಜಾಂಶ ಏನೆಂದರೆ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್​ ರಕ್ಷಣೆ ಆಗ್ತಿದೆ. ಐದು ವರ್ಷಗಳ ಕಾಲ ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಇಡುತ್ತಾರೆ. ಚುನಾವಣೆ ಟೈಂನಲ್ಲಿ ಅಲ್ಪಸಂಖ್ಯಾತರಿಗೆ ಹಗ್ಗ ಕೊಟ್ಟು ಮೇಲೆತ್ತುತ್ತಾರೆ. ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಂದ ಮತ ಹಾಕಿಸಿಕೊಂಡ ಬಳಿಕ ಮತ್ತೆ ಅವರನ್ನು ಬಾವಿಗೆ ತಳ್ಳುತ್ತಾರೆ ಎಂದು ಸಿಎಂ ಗುಡುಗಿದರು.
ಅಲ್ಪಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್​ ಗುತ್ತಿಗೆ ರಾಜಕಾರಣ ಮಾಡುತ್ತಿದೆ. ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಂಡು ತಿರುಗುತ್ತೆ, ಆದರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇ ಈ ಕಾಂಗ್ರೆಸ್​. ನೀವು ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿಲ್ಲ. ಅಲ್ಪಸಂಖ್ಯಾತರೇ ಕಾಂಗ್ರೆಸ್​ ರಕ್ಷಣೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್​ನ್ನು ಬಿಟ್ಟುಕೊಟ್ಟ ದಿನ ನಿಮ್ಮ ಪಕ್ಷ ಅಡ್ರೆಸ್​ಗೇ ಇರಲ್ಲ.
ಕಾಂಗ್ರೆಸ್​ನ್ನು ಮುಳುಗುವ ಹಡಗು ಎಂದು ಕರೆಯುತ್ತಾರೆ. ಆದರೆ ಕಾಂಗ್ರೆಸ್​ ಈಗಾಗಲೇ ಮುಳುಗಿ ಹೋಗಿದೆ. ಬೇಕಿದ್ದರೆ ಭೂಪಟ ನೋಡಿ, ಕರ್ನಾಟಕದಲ್ಲಿ ಒಂಚೂರು ಕಾಂಗ್ರೆಸ್​ ಅಲುಗಾಡ್ತಿದೆ. 30ನೇ ತಾರೀಕು ನೀವು ಬಿಜೆಪಿಗೆ ಮತ ಹಾಕಿ.​ ಅಲುಗಾಡುತ್ತಿರುವ ಕಾಂಗ್ರೆಸ್​ ಮುಳಗೇ ಹೋಗುತ್ತೆ ಎಂದು ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss