spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶದ ಲಸಿಕೆ ಸಾಧನೆ ಹೊಗಳುವ ಮನಸ್ಥಿತಿ ಕಾಂಗ್ರೆಸ್’ಗೆ ಇಲ್ಲ: ಸಚಿವ ಪ್ರಹ್ಲಾದ್ ಜೋಶಿ

- Advertisement -Nitte

ಹೊಸದಿಗಂತ ವರದಿ, ಹುಬ್ಬಳ್ಳಿ:

ಈಡೀ ಜಗತ್ತಿನಲ್ಲಿ 700ಕೋಟಿ ಲಸಿಕಾಕರಣವಾಗಿದ್ದು, ಅದರಲ್ಲಿ ಭಾರತ ನೂರು ಕೋಟಿ ಲಸಿಕೆ ನೀಡಿ ಸಾಧನೆ ಮಾಡಿದರೆ ಕಾಂಗ್ರೆಸ್ ನವರಿಗೆ ದೇಶದ ಸಾಧನೆ ಬಗ್ಗೆ ಮಾತನಾಡುವ ಮನಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ನಗರದ ಚೆನ್ನಮ್ಮ ವೃತ್ತದಲ್ಲಿರುವ‌ ಚೆನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಶ್ವವೇ ಈ ಸಾಧನೆ ಕೊಂಡಾಡಿದ್ದು, ಸ್ವತಃ ಬಿಲಿಗೆಟ್ಸ್ ಸಹ ಟ್ವಿಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಯುರೋಪ ಸೇರಿ ದೊಡ್ಡ ದೊಡ್ಡ ದೇಶದ ಬಗ್ಗೆ ಮಾತನಾಡಿದ್ದಾರೆ. ಆ ದೇಶಗಳಲ್ಲಿ ನೂರು ಕೋಟಿ ಜನಸಂಖ್ಯೆಯಿಲ್ಲ ಮತ್ತು ಅಷ್ಟು ಪ್ರಮಾಣದಲ್ಲಿ ಲಸಿಕೆಯು ಆಗಿಲ್ಲಾ. ಇಲ್ಲಿವರೆಗೂ ಭಾರತದಲ್ಲಿ ಮೊದಲನೇ ಡೋಸ್ ನೂರು ಕೋಟಿ ಮತ್ತು ಎರಡನೇ ಡೋಸ್ ಶೆ. 31 ಅಂದರೆ 31 ಸಾವಿರ ಕೋಟಿ ಲಸಿಕೆ ನೀಡಲಾಗಿದೆ ಎಂದರು.
ರಾಹುಲ್ ಗಾಂಧೀಗೆ ಏನು ಅರ್ಥವಾಗುವುದಿಲ್ಲ: ಈ ದೇಶದ ಸಾಧನೆ ಬಗ್ಗೆ ಬೇರೆ ದೇಶಗಳು ಮಾತನಾಡುತ್ತಿದ್ದರೆ. ನಮ್ಮ ದೌರ್ಬಲ್ಯವೆನೆಂದರೆ ವಿರೋಧ ಪಕ್ಷದಲ್ಲಿರುವ ಇಂತಹ ನಾಯಕರಿರುವುದು. ಅದಕ್ಕೆ ಸಿದ್ದರಾಮಯ್ಯ ಮತ್ತು ಅವರ ಮುಖಂಡರು ರಾಹುಲ್ ಗಾಂಧಿ ಅವರಂತೆ ಮಾಡಬೇಡಿ ಅವರಿಗೆ ಏನು ಅರ್ಥವಾಗಲ್ಲ. ಸ್ವತಃ ಮೋದಿಯವರಿಗೆ ಹೊಗಳಬೇಕು ಎಂದು ನೀವು ಆದರೆ ಇದನ್ನು ನಾನು ಮತ್ತು‌ಮೋದಿಯವರು ಭಯಸುವುದಿಲ್ಲ ದೇಶಕ್ಕೆ ಸಮರ್ಪಣೆ ಮಾಡಿಕೊಳ್ಳಿ ಎಂದು ಚೇಡಿಸಿದರು.
ನಿಮ್ಮ ಕಾಲಗಟ್ಟದಲ್ಲಿ ಪೋಲಿಯೊ, ದಡಾರಸ್ ಲಸಿಕೆಗಳು ಜಗತ್ತಿಗೆ ಬಂದು 30 ವರ್ಷವಾದ ನಂತರ ಭಾರತಕ್ಕೆ ಬಂದಿವೆ. ಆದರೆ ಕೋವಿಡ್ ಲಸಿಕೆ ಭಾರತದೇಶ ಇಂತಹ ಅದ್ಭುತವಾದ ಸಾಧನೆ ಮಾಡಿದ್ದು, ಜಗತ್ತಿನ ಮುಂದುವರಿದೆ ದೇಶಗಳ ಜೊತೆ ಜೊತೆಗೆ ಸಾಗುತ್ತಿದೆ. ಇದಕ್ಕೆ ಎಲ್ಲ ವೈದ್ಯಕೀಯ ಸಿಬ್ಬಂದಿ, ಸರ್ಕಾರ ಸೇರಿದಂತೆ ಅನೇಕರು ಸಹಕಾರ ಕೊಟ್ಟಿದೆ ಇದನ್ನು ಹೇಳು ಸೌಜನ್ಯವಿಲ್ಲದವರಿಗೆ ದೇಶದ ಬಗ್ಗೆ ಅಭಿಮಾನವೆ ಇಲ್ಲಾ ಎಂಬ ಪ್ರಶ್ನೆ ಮೂಡುತ್ತಿದೆ.
ವಯಕ್ತಿಕ ನಿಂದನೆ ಕಟೀಲು ಅಷ್ಟೇ ಮಾಡಿಲ್ಲ: ಉಪಚುನಾವಣೆಯಲ್ಲಿ ವಯಕ್ತಿಕ ನಿಂದನೆ ಕಟೀಲು ಅಷ್ಟೇ ಮಾಡಿಲ್ಲ ಸಿದ್ದರಾಮಯ್ಯನವರು ಮೋದಿಯವರ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮಷ್ಟಕ್ಕೆ ತಾವೇ ಜನಪ್ರಿಯರೆಂದು ಅಂದುಕೊಂಡಿದ್ದರು ನಂತರ ಮುಂದಿನ ಎಲ್ಲ ಚುನಾವಣೆಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಆದರೆ ಯಾವುದೇ ಪಕ್ಷದವರಾದರು ಕೆಳಮಟ್ಟದ ಟೀಕೆ ಮಾಡಬಾರದು ಎಂದರು.
ಕಲಿದ್ದಲು ಸ್ವಲ್ಪದಿನ ಕೊರತೆಯಾಗಿತ್ತು ಆದರೆ ಈಗ 2.1ಮಿ ಪ್ರತಿದಿನ ರಫ್ತು ಮಾಡಲಾಗುತ್ತಿದೆ. ಈಗ ಸುಧಾರಣೆಯಾಗುತ್ತಿದೆ ಏನು ಸಮಸ್ಯೆಯಿಲ್ಲ ಎಂದು ತಿಳಿಸಿದರು.
ಸಿಂದಗಿ ಮತ್ತು ಹಾನಗಲ್ ನಲ್ಲಿ ನಾವು ಗೆಲ್ಲುತ್ತೇವೆ. ಬೆಲೆ ಏರಿಕೆ ಇದಕ್ಕೆ ಯಾವುದೇ ಅಡ್ಡ ಪರಿಣಾಮ ಬೀಳುವುದಿಲ್ಲ. ಹಿಂದೆ ನಡೆದ ಎಲ್ಲ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಅದರಂತೆ ಇಲ್ಲಿಯೂ ಗೆಲ್ಲುತ್ತೇವೆ ಎಂದರು.
ಬಾಂಗ್ಲಾದೇಶ ಹಿಂದೂಗಳ ರಕ್ಷಣೆಯ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದಾರೆ. ಅಲ್ಲಿಯ ಪ್ರಧಾನಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss