ನನ್ನ ಪತ್ನಿಯಾಗುವವಳು ಆ ಇಬ್ಬರಂತೆ ಇರಬೇಕು:ಮದುವೆ ಬಗ್ಗೆ ರಾಹುಲ್ ಗಾಂಧಿ ಕುತೂಹಲಕಾರಿ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸುದೀರ್ಘ ಪಾದಯಾತ್ರೆ ಮುಂದುವರೆದಿದೆ. ಯಾತ್ರೆ ದೆಹಲಿ ತಲುಪಿದ್ದು, ಯಾತ್ರೆಗೆ ತಾತ್ಕಾಲಿಕ ಬ್ರೇಕ್ ಬಿದ್ದ ಕಾರಣ ರಾಹುಲ್ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಎದುರಾಳಿಗಳ ಆರೋಪ, ಪಪ್ಪು ಎನ್ನುವ ಟೀಕೆಗಳಿಗೆ ಉತ್ತರಿಸಿದರು. ಮೇಲಾಗಿ.. ಎಂತಹ ಸಂಗಾತಿ ಬೇಕು ಎಂಬುದಕ್ಕೂ ರಾಹುಲ್ ಕ್ಲಾರಿಟಿ ನೀಡಿದ್ದಾರೆ.

ವಿಪಕ್ಷಗಳು ನಿಮ್ಮನ್ನು ‘ಪಪ್ಪು’ ಎಂದು ಸಂಬೋಧಿಸುತ್ತಿದ್ದಾರೆ.. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದಿದ್ದಕ್ಕೆ ಅವರು ನನ್ನನ್ನು ನಿಂದಿಸಿದರೂ, ಹೊಡೆದರೂ ನಾನು ಯಾರನ್ನೂ ದ್ವೇಷಿಸುವುದಿಲ್ಲ ಎಂದು ರಾಹುಲ್ ಉತ್ತರಿಸಿದರು. ನನಗೆ ಎಷ್ಟು ಹೆಸರು ಕೊಟ್ಟರೂ ಪರವಾಗಿಲ್ಲ, ಜೀವನದಲ್ಲಿ ಏನೂ ಆಗದೆ ಅವರ ಸಂಬಂಧಗಳು ಸರಿಯಿಲ್ಲದೆ ಕೆಲವರು ನರಳುತ್ತಿರುತ್ತಾರೆ. ಅಂಥವರು ಮಾಡೋಕೆ ಬೇರೆ ಕೆಲಸ ಇಲ್ಲದೆ ಇಂತಹ ಟೀಕೆ ಮಾಡುತ್ತಾರೆ ಎಂದು ರಾಹುಲ್ ಕೌಂಟರ್ ಕೊಟ್ಟಿದ್ದಾರೆ.

ಮದುವೆ ಪ್ರಸ್ತಾಪಕ್ಕೆ ರಾಹುಲ್ ಪ್ರತಿಕ್ರಿಯಿಸಿದ್ದು, ನನ್ನ ಭಾವಿ ಪತ್ನಿ ಅಜ್ಜಿ (ಮಾಜಿ ಪ್ರಧಾನಿ ಇಂದಿರಾಗಾಂಧಿ) ಅವರಂತಹ ಗುಣವುಳ್ಳ ಮಹಿಳೆಯಾದರೆ ನನ್ನ ಅಭ್ಯಂತರವಿಲ್ಲ. ತಾಯಿ (ಸೋನಿಯಾ ಗಾಂಧಿ) ಶಾಂತ ಗುಣಗಳನ್ನು ಹೊಂದಿರುವ ಮಹಿಳೆ ಇದ್ದರೆ ಉತ್ತಮ ಎಂದು ತನ್ನ ಭಾವಿ ಪತ್ನಿಗೆ ಇರಬೇಕಾಗಿರುವ ಗುಣಗಳನ್ನು ರಾಹುಲ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!