ದಿಗಂತ ವರದಿ ಕಲಬುರಗಿ:
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಚಮಚಾಗಿರಿ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ ಕಿಡಿಕಾರಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರು ಚಮಚಾಗಿರಿ ಧಂಧೆಗೆ ಇಳಿದಿದ್ದಾರೆ ಎಂದರು.
ನಮ್ಮ ತಟ್ಟೆಯಲ್ಲಿನ ನೋಣ ನೋಡುವದಕ್ಕೂ ಮುನ್ನ, ನಿಮ್ಮ ತಟ್ಟೆಯನ್ನು ಸ್ವಲ್ಪ ನೋಡಿಕೊಳ್ಳಿ ಎಂದರು. ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಅಲ್ಪ ಸಂಖ್ಯಾತರನ್ನು ಸಿಎಂ. ಡಿಸಿಎಂ ಅಥವಾ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೇಯಾ ಎಂದು ಪ್ರಶ್ನೆ ಮಾಡಿದರು.
ಈ ವಿಷಯದ ಅಂಗವಾಗಿ ಕೈ ನಾಯಕರು ಬಹಿರಂಗ ಚಚೆ೯ಗೆ ಸಿದ್ದವಿದ್ದರೆ, ನಾವು ಬರುತ್ತೆವೆ ಎಂದರು.