ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕಲಬುರಗಿ:
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಹಮ್ಮಿಕೊಂಡ ಸಮಾರಂಭದಿಂದ ಹಿರಿಯ ಕಾಂಗ್ರೆಸ್ ಶಾಸಕ ಎಮ್. ವೈ. ಪಾಟೀಲ್ ತಮಗೆ ಗೌರವ ಸಿಕ್ಕಿಲ್ಲ ಎಂದು ಮುನಿಸಿಕೊಂಡು ಸಮಾರಂಭದಿಂದ ಹೊರ ನಡೆದಿರುವ ಘಟನೆ ನಡೆಯಿತು.
ಇದು ಸರ್ಕಾರಿ ಸಮಾರಂಭವಲ್ಲ ಇದು ಬಿಜೆಪಿ ಸಮಾರಂಭದಂತೆ ಕಂಡುಬರುತ್ತಿದೆ. ವೇದಿಕೆ ಮೇಲೆ ಬಿಜೆಪಿಯ ಪ್ರತಿಯೊಬ್ಬರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆದರೆ ಹಿರಿಯ ಶಾಸಕರು ಎನ್ನುವುದನ್ನೂ ಮರೆತು, ಶಿಷ್ಠಾಚಾರ ಉಲ್ಲಂಘಿಸಿ ನಮಗೆ ವೇದಿಕೆ ಮುಂಭಾಗದ ಕೆಳಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಮುನಿಸಿಕೊಂಡು ಸಮಾರಂಭ ಆರಂಭದಲ್ಲಿಯೇ ಶಾಸಕ ಪಾಟೀಲ್ ಹೊರನಡೆದರು.
ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನ ಬಿಡುಗಡೆ, ನೂತನ ತರಕಾರಿ ಮಾರುಕಟ್ಟೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗೆ ಸಮಾರಂಭವನ್ನು ಕಣ್ಣಿ ಮಾರುಕಟ್ಟೆ ಬಳಿ ಹಮ್ಮಿಕೊಳ್ಳಲಾಗಿತ್ತು.