Saturday, April 1, 2023

Latest Posts

ಕಾಂಗ್ರೆಸ್ ಯಾವತ್ತೂ ಪಾಠ ಕಲಿಯುವುದಿಲ್ಲ: ಕ್ಯಾ. ಅಮರೀಂದರ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಹೈಕಮಾಂಡ್ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ) ಯಾವತ್ತೂ ಪಾಠ ಕಲಿಯುವುದಿಲ್ಲ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತಪಡೆದು ಗದ್ದುಗೆ ಏರಿದೆ. ಈ ನಡುವೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಪಂಜಾಬ್ ನಲ್ಲಿ ಕಾಂಗ್ರೆಸ್ ಸೋಲಿಗೆ ‘ಕ್ಯಾಪ್ಟನ್ ಅಡಿಯಲ್ಲಿ 4.5 ವರ್ಷಗಳ ಆಡಳಿತ ವಿರೋಧಿ ಕಾರ್ಯ’ ಕಾರಣ ಎಂದು ಹೇಳಿದ್ದರು.
ಇದಕ್ಕೆ ಉತ್ತರ ನೀಡಿದ ಅಮರಿಂದರ್ ಸಿಂಗ್ , ಕಾಂಗ್ರೆಸ್​​ನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ, ಕಾಂಗ್ರೆಸ್ ನಾಯಕತ್ವ ಎಂದಿಗೂ ಕಲಿಯುವುದಿಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ಮಾತ್ರವಲ್ಲ ಇತರ ರಾಜ್ಯಗಳಲ್ಲಿಯೂ ನೀವು ಹೀನಾಯವಾಗಿ ಸೋತಿದ್ದೀರಿ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಯಾರು ಹೊಣೆ? ಮಣಿಪುರ, ಗೋವಾ, ಉತ್ತರಾಖಂಡ್ ನ ಫಲಿತಾಂಶ ಏನಾಯ್ತು ಎಂದು ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಉತ್ತರವನ್ನು ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ ಆದರೆ ಅವರು ಅದನ್ನು ಓದುವುದನ್ನು ತಪ್ಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!