ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..
ಹೊಸದಿಗಂತ ವರದಿ,ಕಲಬುರಗಿ:
ನಗರಕ್ಕೆ ಸಿಗಬೇಕಾದ ಸ್ಮಾರ್ಟ್ ಸಿಟಿ ಯೋಜನೆ ಮೊದಲ ಹಂತದಲ್ಲಿ ಕೈ ತಪ್ಪಲು ಕಾಂಗ್ರೆಸ್ ಪಕ್ಷದ ಕೈವಾಡವೇ ಕಾರಣವೆಂದು ಅರೋಪಿಸಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೈರ್ ಅವರು ಆದರೆ ಎರಡನೇ ಹಂತದಲ್ಲಿ ಕಲಬುರಗಿ ಹೆಸರು ಸೇರ್ಪಡೆ ವಿಷಯ ಸರ್ಕಾರದ ಚಿಂತನೆಯಲ್ಲಿದೆ ಎಂದರು.
ಮೊದಲ ಹಂತದಲ್ಲಿ ಕಲಬುರಗಿಗೆ ಸ್ಮಾರ್ಟ್ ಸಿಟಿ ಕೈತಪ್ಪಲು ಕಾಂಗ್ರೆಸ್ನವರ ಕೈವಾಡ ಇದೆ. ಒಂದು ವೇಳೆ ಸ್ಮಾರ್ಟ್ ಸಿಟಿ ಸಿಕ್ಕರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರಿಗೆ ಕ್ರೆಡಿಟ್ ಹೋಗುತ್ತದೆ ಎಂಬ ಅಧಿಕಾರದ ದುರದ್ದೇಶ ಅವರದ್ದಾಗಿತ್ತು. ಹೀಗಿದ್ದಾಗ ಸ್ಮಾರ್ಟ್ ಸಿಟಿ ಆಯ್ಕೆ ಮಾನದಂಡದ ಷರತ್ತು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಜನಾಶೀರ್ವಾದ ಮಾಡಿದರೆ, ಇಡೀ ಕಲಬುರಗಿ ಸಮಗ್ರ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಅಮೃತ ಯೋಜನೆ ಅಡಿ 150 ಕೋಟಿ ರೂ. ಅನುದಾನವನ್ನು ಒಳಚರಂಡಿ ದುರಸ್ತಿ, ಹೊಸ ಸಂಪರ್ಕ ಕಲ್ಪಿಸುವ ಬಗ್ಗೆ ವಿನಿಯೋಗಿಸಲಾಗಿದೆ. ಕೆಕೆಆರ್ಡಿಬಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ಎರಡು ಆಸ್ಪತ್ರೆಗಳ ನಿರ್ಮಾಣ, 10 ಕೋಟಿ ರೂ. ವೆಚ್ಚದಲ್ಲಿ ಅಪ್ಪನ ಕೆರೆ ಅಭಿವೃದ್ಧಿಪಡಿಸಿ, ಸೌಂದರ್ಯಿಕರಣ ಮಾಡಲಾಗುತ್ತಿದೆ. ಇನ್ನು ಅನಧಿಕೃತ ಲೇಔಟ್ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಮಾತನಾಡಿ, ಒಟ್ಟು 55 ವಾರ್ಡ್ಗಳ ಪೈಕಿ 30 ರಿಂದ 35 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಪಕ್ಷದ ಆಂತರಿಕ ಸಮೀಕ್ಷೆ ವರದಿಯಿಂದ ತಿಳಿದು ಬಂದಿದೆ.
ಚುನಾವಣಾ ಕಣದಲ್ಲಿ ಕಾಂಗ್ರೆಸ್ ಪೈಪೋಟಿ ಇಲ್ಲವೇ ಇಲ್ಲ, ಜೆಡಿಎಸ್, ಎಂಐಎಂ, ಸ್ವತಂತ್ರ ಅಭ್ಯರ್ಥಿಗಳು ಮಾತ್ರ ಪ್ರಬಲ ಪೈಪೋಟಿವೊಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೋಲಿನ ಭೀತಿಯಿಂದಾಗಿ ಶಸ್ತ್ರಾತ್ಯಾಗ ಮಾಡಿದೆ ಎಂದು ಟೀಕಿಸಿದರು. ಆದರೆ ಮತಬಾಂಧವರು ಸಮಾಜವಿರೋಧಿ ಚಟುವಟಿಕೆಗಳಿಗೆ ಕಿವಿಗೊಡಬಾರದು. ಯಾವುದೇ ಆಸೆ ಆಮಿಷೆಗೊಳಗಾಗದೆ ನಿರ್ಭಿತಿಯಿಂದ ಮತ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜಕುಮಾರ ಪಾಟೀಲ್, ಬಸವರಾಜ್ ಮತ್ತಿಮಡು, ಎಂಎಲ್ಸಿ ಬಿ.ಜಿ. ಪಾಟೀಲ್, ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್, ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಇದ್ದರು.