ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ವರದಿ, ಮೈಸೂರು:
ಮಹಾಮಾರಿ ಕೊರೋನಾ ಸೋಂಕು ಹರಡುವಿಕೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕವತಿಯಿಂದ ಶನಿವಾರ ಆರೋಗ್ಯ ಸಹಾಯವಾಣಿ ಆರಂಭಿಸಲಾಯಿತು.
ನಗರದ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು, ಆರೋಗ್ಯ ಸಹಾಯವಾಣಿಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಹಾಯವಾಣಿಗೆ ಚಾಲನೆ ನೀಡಿದರು.ಅವರಿಗೆ ಗೆ ಶಾಸಕರಾದ ಮಂಜುನಾಥ್, ಅನಿಲ್ ಚಿಕ್ಕಮಾದು, ಸಾಥ್ ನೀಡಿದರು. ಈ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್ನಾಥ್, ಮಾಜಿ ಶಾಸಕರಾದ ವಾಸು, ಸೋಮಶೇಖರ್ ಸೇರಿ ಹಲವರು ಉಪಸ್ಥಿತರಿದ್ದರು.
ಕೊರೋನಾದಿಂದ ಬಳಲುತ್ತಿರುವವರಿಗೆ ಆನ್ಲೈನ್ ಮುಖಾಂತರ ಚಿಕಿತ್ಸೆ.ಆತ್ಮಸ್ಥೆöÊರ್ಯ ತುಂಬಲು ಸಹಾಯವಾಣಿ ಮೂಲಕ ಕಾಂಗ್ರೆಸ್ ಮುಂದಾಗಿದ್ದು, ವೈದ್ಯರು, ಹೃದಯ ತಜ್ಞರು, ಮಕ್ಕಳ ತಜ್ಞರ ಫೋನ್ ನಂಬರ್ನ್ನು ಪ್ರಕಟಿಸಿದೆ. ಹೃದಯ ಸಂಬAಧಿ ಸಮಸ್ಯೆಗಳಿಗಾಗಿ
ಶ್ರೀನಿವಾಸ್- 9448060250, ಮಕ್ಕಳ ತಜ್ಞರು ಸಂತೋಷ್ 9880999649 ಹಾಗೂ ವೈದ್ಯರಾದ
ವಸಂತ್ ಅವರ ಮೊಬೈಲ್ ನಂ 9945110129ಗೆ ನೆರವು ಅಗತ್ಯವಿರುವವರು ಸಂಪರ್ಕಿಸಬಹುದಾಗಿದೆ .
ಜನರಿಗೆ ಸೇವೆ ಸಲ್ಲಿಸಲು ಆನ್ಲೈನ್ ನಂಬರ್ ಮೊಬೈಲ್ 9343305375 ಬಿಡುಗಡೆ ಮಾಡಿದ್ದು, ಕೊರೋನಾದಿಂದ ಬಳಲುತ್ತಿರುವವರು ಸಹಾಯಕ್ಕಾಗಿ ಈ ನಂಬರ್ನ್ನು ಸಂಪರ್ಕಿಸಬಹುದಾಗಿದೆ.