spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರಿಯಾಂಕಾ ಗಾಂಧಿ ಯಾರು?: ರ‍್ಯಾಲಿಗೆ ಬಂದ ಜನರ ಉತ್ತರ ಹೀಗಿದೆ..

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಎಲೆಕ್ಷನ್ ನ ಕಾವು ಹೆಚ್ಚಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಚಾಪು ಮೂಡಿಸಲು ಹರಸಾಹಸ ಪಡುತ್ತಲೇ ಇರುತ್ತವೆ. ಅಂತಹ ಒಂದು ಕಾಂಗ್ರೆಸ್ ನ ಪ್ರಚಾರದ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವಿಡಿಯೋ ಜುಲೈ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶಕ್ಕೆ ಹೋಗಿದ್ದ ವೇಳೆ ಸುದ್ಧಿವಾಹಿನಿ ಒಂದು ನಡೆಸಿದ ವರದಿಯಾಗಿದೆ. ಆದರೆ ಈಗ ಈ ವಿಡಿಯೋವನ್ನು ಲೇಖಕಿ ಅಧ್ವೈತ ಕಾಲಾ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಕಾಂಗ್ರೆಸ್ ಪೇಚಿಗೆ ಸಿಲುಕಿದಂತಾಗಿದೆ.

ಅಂತಹದ್ದೇನಿದೆ ಈ ವಿಡಿಯೋದಲ್ಲಿ?

ಚುನಾವಣೆ ನಿಮಿತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ರ‍್ಯಾಲಿಗಾಗಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನು ಸುದ್ದಿ ವಾಹಿನಿಯೊಂದು ಸಂದರ್ಶಿಸಿದ ವೇಳೆ ಕಾಂಗ್ರೆಸ್ ಗೆ ಮುಖಭಂಗವಾದಂತಾಗಿದೆ.
ಹೌದು, ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ನಾಯಕಿ ಯಾರು? ಆಕೆ ಯಾವ ಹುದ್ದೆ ಹೊಂದಿದ್ದಾರೆ? ನೀವು ಯಾರನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೀರಾ? ಎಂದು ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಜನರು ತಬ್ಬಿಬ್ಬಾದ ದೃಶ್ಯ ಈಗ ವೈರಲ್ ಆಗಿದೆ.
ಪ್ರಿಯಾಂಕಾ ಗಾಂಧಿ ಯಾರು ಎಂದು ಕೇಳಿದ ಪ್ರಶ್ನೆಗೆ ಒಬ್ಬ ವ್ಯಕ್ತಿ ಆಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ತಾನು ಬೆಂಬಲಿಸಲು ಬಂದಿರುವ ನಾಯಕಿಯ ಹೆಸರು ಮನೇಕಾ ಗಾಂಧಿ, ಪ್ರೇಮಕಾ ಗಾಂಧಿ ಎಂದಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಕಾಂಗ್ರೆಸಿಗರನ್ನು ಟೀಕಸುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss