Monday, August 8, 2022

Latest Posts

ಹಣ ಹಂಚಿ ಚುನಾವಣೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಗೋಣಿ ಚೀಲದಲ್ಲಿ ಹಣ ಹಂಚಿ ಚುನಾವಣೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಬಿಜೆಪಿಯವರು ನೈಜತೆಯ ಮೂಲಕ ವಿಶ್ವಾಸ ಗಳಿಸಿ ಚುನಾವಣೆ ಮಾಡುವ ಸಂಸ್ಕೃತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಹಾನಗಲ್ ತಾಲೂಕಿನ ಅಡಿಅಂಕನಹಳ್ಳಿಯ ಫಾರ್ಮ್ ಹೌಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅಧಿಕಾರದಲ್ಲಿದ್ದಾಗ ಕುಂದಗೋಳ, ನಂಜನಗೂಡು, ಗುಂಡ್ಲಪೇಟೆ ಉಪ ಚುನಾವಣೆಗಳಲ್ಲಿ ಗೋಣಿ ಚೀಲದಲ್ಲಿ ಹಣ ಹಂಚಿದ ಅನುಭವದ ಮೇಲೆ ಅವರು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಹಣದ ಮೇಲೆ ಚುನಾವಣೆ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ ಅದು ಅವರ ಸಂಸ್ಕೃತಿಯನ್ನು ಮನಗೆ ಹೋಲಿಸಿವುದು ಸರಿಯಾದುದಲ್ಲ ಎಂದರು.

ದಿನೇ ದಿನೇ ಜನತೆಯ ಬೆಂಬಲ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಅಧಿಕ ಮತಗಳ ಅಂತರದಿಂದ ಗೆಲುವನ್ನು ಸಾಧಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜನ ಬೆಂಬಲದಿಂದಾಗಿ ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗೆ ತಿರುಗಿ ನೋಡಿದವರೂ ಅಲ್ಲ. ಹಾವೇರಿ ಜಿಲ್ಲೆಗೆ ಮಂಜೂರ ಮಾಡಿದ್ದ ವೈದ್ಯಕೀಯ ಕಾಲೇಜಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದ್ದರೆ ಇಷ್ಟೊತ್ತಿಗಾಗಲೇ ವೈದ್ಯಕೀಯ ಕಾಲೇಜ್ ಪ್ರಾರಂಭವಾಗಿರುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಆರ್ಥಿಕ ನೆರವನ್ನು ನೀಡದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲೆಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜ್ ಗದಗ ಜಿಲ್ಲೆಗೆ ಹೋತು. ಪ್ರಸಕ್ತ ಚುನಾವಣೆ ಆಗಮಿಸಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿನವರು ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡುತ್ತಿದ್ದಾರೆ ಇದೆಲ್ಲ ಜನತೆಗೆ ತಿಳಿದಿದೆ ಹೀಗಾಗಿ ಜನತೆ ಅವರ ಬಣ್ಣದ ಮಾತುಗಳಿಗೆ ಮರುಳಾಗುವುದಿಲ್ಲ ಎಂದು ತಿಳಿಸಿದರು.

ಚುನಾವಣೆಯಲ್ಲಿ ತಳಹಂತದ ವಾಸ್ತವತೆಯೇ ಬೇರೆಯಿರುತ್ತದೆ. ಕಾಂಗ್ರೆಸ್ ನವರು ಕೇವಲ ವಾದವನ್ನು ಮಾಡುತ್ತ ಹೋಗುತ್ತಿದ್ದಾರೆ ಆದರೆ ನಾವು ಜನತೆಯ ಮನಸ್ಸನ್ನು ಗೆಲ್ಲುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಉಪ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮೂಲೆಗುಂಪು ಮಾಡಲಾಗುವುದು ಎಂದು ಹೇಳಿಕ್ಕೆ ಡಿಕೆಶಿ ಹೇಳಿದರೇನು. ನಾವು ಈ ಭೂಮಿಯಲ್ಲಿ ಆಳವಾದ ಬೇರನ್ನು ಬಿಟ್ಟವರು. ನಮ್ಮನ್ನು ಜನತೆ ಕೈಬಿಡುವುದಿಲ್ಲ, ನಾವು ಜನತೆಯನ್ನು ಕೈಬಿಡುವುದಿಲ್ಲ. ಕಾಂಗ್ರೆಸ್ದವರು ಯಾವುದೇ ಸ್ಟೆಟರ್ಜಿ ಮಾಡಲಿ, ಷಡ್ಯಂತ್ರ ಮಾಡಲಿ ಅದು ನಡೆಯುವದಿಲ್ಲ ಎಂದು ತಿಳಿಸಿದರು.

ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡಿದವರು ಕಾಂಗ್ರೆಸ್ಸಿನವರು. ಅವರು ಜನರ ಬಳಿ ಹೋಗಿ ಗೊತ್ತೇಯಿಲ್ಲ. ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ. ಪೆಟ್ರೋಲಿಯಂ ಬಾಂಡುಗಳನ್ನು ಮಾರಿ ಆರ್ಥಿಕತೆಯ ಸ್ಥಿತಿ ಈ ಮಟ್ಟಕ್ಕೆ ಬರುವುದಕ್ಕೆ. ತೈಲೋತ್ಪನ್ನಗಳ ಬೆಲೆ ಏರಿಕೆಗೆ ಕಾರಣರಾದವರು ಕಾಂಗ್ರೆಸ್ಸಿನವರು. ಅದನ್ನು ಮರೆ ಮಾಚುವುದಕ್ಕೆ ಈ ರೀತಿ ಹೇಳಿಕೆಗಳನ್ನು ಭಾಷಣಗಳನ್ನು ಮಾಡಿಕೊಳ್ಳುತ್ತ ಹೋಗುತ್ತಿದ್ದಾರೆ ಎಂದರು.

ಕಾಂಗ್ರೆಸ್ಸಿನವರು ಕೇವಲ ಕೊರೋನಾ ಬಗ್ಗೆ ಟೀಕೆಗಳನ್ನು ಮಾಡುತ್ತ ಹೋಗುತಗತಿರುವ ಬಗ್ಗೆ ಅಂಕಿ ಸಖ್ಯೆಯೊಂದಿಗೆ ಅವರಿಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ, ಎನ್.ರವಿಕುಮಾರ, ಶಾಸಕ ರಾಜುಗೌಡ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹಾಗೂ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss